ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜಿ ಎಸ್.ಟಿ ಕಾಲನಿ ರಸ್ತೆಗೆ ಹತ್ತ ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಅರಣ್ಯ ಮತ್ತು ಪರಿಸರ ಜೀವ ಶಾಸ್ತ್ರಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ರಮಾನಾಥ ರೈ ಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಎಂ.ಎಸ್. ಮಹಮ್ಮದ್, ತಾ.ಪಂ ಸದಸ್ಯರಾದ ಮಾಧವ ಮಾವೆ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ, ಉಪಾಧ್ಯಕ್ಷರಾದ ನಿಶಾಂತ್ ರೈ, ಪಾಣೆಮಂಗಳೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ ವೀರಕಂಭ ಗ್ರಾಮ ಪಂಚಾಯತ್ ನ ಸದಸ್ಯರು ಮತ್ತು ರಾಮದಾಸ್ ರೈ ನಡ್ಚಾಲ್ ಗಣಪತಿ ಭಟ್, ನಾರಾಯಣ ಭಟ್ ಬೆತ್ತಸರವು ಹಾಗೂ ಊರವರು ಉಪಸ್ಥಿತರಿದ್ದರು.
