ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆಯಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳು ಕೊನೆಗೂ ಉರಿಯಲಾರಂಬಿಸದವು. ಇಲ್ಲಿನ ಜನರ ಬಹು ಬೇಡಿಕೆಯಾಗಿರುವ ಹಲವು ವರ್ಷಗಳಿಂದ ಉರಿಯದೆ ಕತ್ತಲ ಕೂಪವಾಗಿ ಪರಿಣಮಿಸಿದ್ದ ಬಂಟ್ವಾಳ ಪುರಸಭೆ ವ್ಯಾಪ್ತಿಗೆ ಸಂಬಂದಪಟ್ಟ ಬೀದಿ ದೀಪಗಳು ಮಾತ್ರ ಉರಿಯಲಾರಂಬಿಸಿದೆ
DSC_3650
ಬಂಟ್ವಾಳ ಪುರಸಭೆ ಹಾಗೂ ನರಿಕೊಂಬು ಗ್ರಾಮ ಪಂಚಾಯತ್ನ ಗಡಿ ಭಾಗಗಳನ್ನು ಹೊಂದಿರುವ ಈ ಸೇತುವೆಯ ಮೇಲ್ಭಾಗದ ಒಂದು ಬದಿಯಲ್ಲಿ ಸೇತುವೆ ಉದ್ಘಾಟನೆ ಸಂದರ್ಭದಲ್ಲೇ ಸಾಲಾಗಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಇಲ್ಲಿ ಗಡಿ ಸಮಸ್ಯೆ ಇದ್ದರೂ ಬೀದಿ ದೀಪಗಳ ಸಂಪೂರ್ಣ ನಿರ್ವಹಣೆ ಹಾಗೂ ವಿದ್ಯುತ್ ಬಿಲ್ ಪಾವತಿಸುವ ಜವಾಬ್ದಾರಿ ಬಂಟ್ವಾಳ ಪುರಸಭೆಗೆ ವಹಿಸಿಕೊಡಲಾಗಿದೆ ಎನ್ನಲಾಗಿದೆ.
ಆದರೆ ಸೇತುವೆ ಉದ್ಘಾಟನೆ ಸಂದರ್ಭ ಒಂದಷ್ಟು ಸಮಯ ಉರಿದ ಈ ಬೀದಿ ದೀಪಗಳು ಕ್ರಮೇಣ ಎಲ್ಲವೂ ಸಂಪೂರ್ಣ ನಿಷ್ಕ್ರಿಯವಾಗಿದೆ. ಒಂದೇ ಒಂದು ದೀಪವೂ ಕಳೆದ ಹಲವು ವರ್ಷಗಳಿಂದ ಇಲ್ಲಿ ಉರಿಯುತ್ತಿರುವುದು ಕಂಡು ಬರುತ್ತಿಲ್ಲವಾದ್ದರಿಂದ ಸಾರ್ವಜನಿಕರು ಪುರಸಭೆಗೆ ದೂರು ಹಲವು ಬಾರಿ ನೀಡಿದ್ದರು. ಇತ್ತೀಚಿನ ಎಲ್ಲಾ ಸಾಮಾನ್ಯ ಸಭೆಗಳಲ್ಲೂ ದೀಪದ ಬಗ್ಗೆ ಚಚರ್ೆ ನೆಡಯುತ್ತಿತ್ತು. ಕೊನೆಗೂ ಒತ್ತಡಕ್ಕೆ ಮಣಿದು ನಿನ್ನೆ ಬೀದಿ ದೀಪಗಳು ಉರಿಯುವ ಸ್ಥಿತಿಗೆ ತಲುಪಿದೆ. ಇನ್ನೇಷ್ಟು ದಿನ ಈ ದೀಪಗಳು ಉರಿಯುತ್ತಿದೆ ಎನ್ನುವುದನ್ನು ಮಾತ್ರ ಕಾದು ನೋಡಬೇಕು.
ದೀಪಗಳು ಉರಿಯದೇ ಇದ್ದ ಪರಿಣಾಮ ಇಲ್ಲಿ ಹಲವು ಅನಾಹುತಗಳಿಗೂ ಕಾರಣವಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಈ ಸೇತುವೆಯ ಮಧ್ಯಭಾಗದಲ್ಲಿ ಬಸ್ಸು ಹಾಗೂ ಅಟೋ ರಿಕ್ಷಾಗಳ ಮಧ್ಯೆ ನಡೆದ ಭೀಕರ ಅಪಘಾತವೊಂದು ನಡೆದ ಸಂದರ್ಭ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಜಮಾಯಿಸಿದ್ದರೂ ಬೀದಿ ದೀಪಗಳಿಲ್ಲದೆ ಪರಿಹಾರ ಕಾರ್ಯಕ್ಕೆ ಭಾರೀ ತೊಡಕಾಗಿತ್ತು. ಬಳಿಕ ಸಾರ್ವಜನಿಕರು ತಮ್ಮ ಮೊಬೈಲ್ ಟಾರ್ಚ್ ಉರಿಸಿ ಹಾಗೂ ವಾಹನಗಳ ಹೆಡ್ಲೈಟ್ ಉರಿಸಿ ಪರಿಹಾರ ಕಾರ್ಯ ನಡೆಸಿದ್ದಾರಾದರೂ ಅದು ಫಲ ನೀಡದೆ ನಾಲ್ಕು ಜೀವಗಳು ಜೀವ ತೆತ್ತಿದ್ದವು.
ಈಗಲೂ ಇಲ್ಲಿ ಲಘು ವಾಹನಗಳು ಏನಾದರೂ ಸಣ್ಣ ಪುಟ್ಟ ಅನಾಹುತಗಳಿಗೆ ಒಳಗಾದರೆ ಹಿಂದಿನಿಂದ ಬರುವ ಘನ ವಾಹನಗಳಿಗೆ ಅದು ಗಮನಕ್ಕೆ ಬಾರದೆ ಭಾರೀ ಅವಘಡ ಸಂಭವಿಸುವ ಎಲ್ಲ ಸಾಧ್ಯತೆಗಳೂ ಕಂಡು ಬರುತ್ತಿತ್ತು. ಪುರಸಭೆ ಇಲ್ಲಿನ ದೀಪಗಳ ವಿದ್ಯುತ್ ಬಿಲ್ ಪಾವತಿಸದೆ ಇರುವುದರಿಂದ ಇದಕ್ಕಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂಬುದು ಮಾಹಿತಿಗಳಿಂದ ತಿಳಿದು ಬಂದಿದೆ.

ನರಿಕೊಂಬು ಗ್ರಾಮ ಪಂಚಾಯತ್ನ ಗಡಿ ಭಾಗಗಳನ್ನು ಹೊಂದಿರುವ ಈ ಸೇತುವೆಯ ಮೇಲ್ಭಾಗದ ಒಂದು ಬದಿಯಲ್ಲಿ ಪಾಣೆಮಂಗಳೂರು ವರೆಗೆ ಇರುವ ಅರ್ದದಷ್ಟು ದೀಪಗಳು ಇನ್ನೂ ಕೂಡ ತನ್ನ ಕಾರ್ಯವನ್ನು ಆರಂಬಿಸಿಲ್ಲ. ಅದಕ್ಕೆ ಪಂಚಾಯತ್ ಮನಸ್ಸು ಮಾಡಬೇಕಾಗಿದೆ. ಅದರ ರಿಪೇರಿ ಮಾಡಿ ಉರಿಯುವ ಸ್ಥಿತಿಗೆ ಈ ದೀಪಗಳು ಬಂದರೆ ಮಾತ್ರ ಸಾರ್ವಜನಿಕರಿಗೆ , ವಾಹನ ಚಾಲಕರಿಗೆ ಸಹಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ನರಿಕೊಂಬು ಗ್ರಾಮ ಪಂಚಾಯತ್ ಕೂಡಲೇ ಈ ಕಾರ್ಯವನ್ನು ಮಾಡಬೇಕಾಗಿದೆ.

By suddi9

Leave a Reply

Your email address will not be published. Required fields are marked *