ಕೈಕಂಬ: ಸಾಮಾಜಿಕ ಬೆಳವಣಿಗೆಗಳ ಇನ್ನೆಲೆಯಲ್ಲಿ ಕೈಕ್ಷಣಿಕ ಪ್ರಗತಿ ಮೂಲ ಸತ್ವವಾಗಿದ್ದು ತುಳುನಾಡಿನ ಗುತ್ತುಗಳು ಈ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಿದರೆ ಸಮಾಜಕ್ಕೆ ಉತ್ತಮ ಕೊಡುಗೆಯಾಗುವುದು. ಧಾರ್ಮಿಕ ಪರ್ವಗಳ ನಡುವೆಯೇ ಸಾಮಾಜಿಕ ಕಳಕಲಿಯ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉದ್ದರಿಸುವ ಸಂಸ್ಕಾರವನ್ನು ಅನುಸರಿಸಿದರೆ ಉತ್ತಮ ಜತೆಗೆ ಉದಯೋನ್ಮುಕರಿಗೆ ಹಾಗೂ ಎಳೆಯರಿಗೆ ನಾಡಿನ ಪರಂಪರೆ ಹಾಗೂ ಸಂಸ್ಕಾರವನ್ನು ತಿಳಿ ಹೇಳುವ ಪ್ರಯತ್ನವು ಅಷ್ಟೇ ಮುಖ್ಯ ಎಂದು ಬೆಂಗಳೂರು ಕಬ್ಬನ್ ಪಾರ್ಕ್ ಪೋಲಿಸ್ ಠಾಣಾ ಉಪನಿರೀಕ್ಷಕರು ಕಾರ್ತ್ಯಾಯನಿ ಹರಿಪ್ರಸಾದ ಆಳ್ವ ಹೇಳಿದರು.
ಅವರು ಜ.19 ರಂದು ಮಂಗಳವಾರ ವೈದ್ಯನಾಥ ವೇದಿಕೆಯಲ್ಲಿ ಗುರುಪುರ ಗೋಳಿದಡಿಗುತ್ತಿನ “ಗುತ್ತುದ ವರ್ಸೊದ ಪರ್ಬೊ” ಇದರ ಧಾರ್ಮಿಕ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ಮುಂಡಬೆಟ್ಟುಗುತ್ತು ಪೆರಾರ ಗಂಗಾಧರ ರೈ ದೀಪ ಪ್ರಜ್ವಲನೆಗೊಳಿಸಿದರು. ಕೃಷಿಕ ಹೈಕೋರ್ಟ್ ವಕೀಲ ಪ್ರಮೋದ್ ರೈ ಇಳಂತಾಜೆ ಅವರು ಶುಭಶಂಸೆನೆಗೈದರು. ಚಿಕ್ಕಮಂಗಳೂರು ವೇದ ವಿಜ್ಞಾನ ಮಂದಿರದ ಬ್ರಹ್ಮಶ್ರೀ ಕೆ.ಎಸ್ ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಮೂಳೂರು ಗುರುಪುರ ಶ್ರೀ ಮುಂಡಿತಾಯ ದೈವಸ್ಥಾನದ ತಂತ್ರಿ ಜಿ.ಟಿ ಅಣ್ಣು ಭಟ್ ಅವರ ನೇತೃತ್ವದಲ್ಲಿ ಧಾಮರ್ಿಕ ವಿಧಿವಿಧಾನಗಳ ನೆರವೇರಿತು.
ಮುಖ್ಯ ಅತಿಥಿಗಳಾಗಿ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ. ಎಂ.ಉದಯ ಭಟ್, ಮುಂಡಿತಾಯ ದೈವಸ್ಥಾನದ ಮೂಲ ಅರ್ಚಕ ದೊಂಬಯ್ಯ ಪೂಜಾರಿ, ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ಬೆಳ್ಳಿಬೆಟ್ಟುಗುತ್ತು ಜ್ಯೋತಿ ರೈ ಪ್ರಾರ್ಥಿಸಿದರು ತಿಮರೋಡಿ ಗುತ್ತು ಮಹೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೆರಾರ ಬಲಾಂಡಿ ಮುಕಾಲ್ದಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


















