ಸುದ್ದಿ9ಬಂಟ್ವಾಳ: ಸೌತ್ ಕೆನರಾ ಛಾಯಾಗ್ರಾಹಕರ ಸಂಘ ಬಂಟ್ವಾಳ ವಲಯದ ವತಿಯಿಂದ ಬಂಟ್ವಾಳ ವಲಯದ ಛಾಯಾಗ್ರಾಹಕರಿಗೆ ಫೋಟೋಶಾಪ್ ಮತ್ತು ಕ್ಯಾಮಾರಾ ಸೆಟ್ಟಿಂಗ್ ಬಗ್ಗೆ ಕಾರ್ಯಗಾರ ಜನವರಿ 27ರಂದು ಸೋಮವಾರ ಹೋಟೆಲ್ ಕೃಷ್ಣಿಮಾದಲ್ಲಿ ನಡೆಯಲಿದೆ. ಈ ಕಾರ್ಯಗಾರದಲ್ಲಿ ಫೋಟೋಶಾಪ್ ಬಗ್ಗೆ ತರಬೇತಿಯನ್ನು ನೀಡಲು ಅನುಭವಿಗಳಾದ ಆರ್. ಶಿವರಾಮ್ ಸೇಲಂ ಮತ್ತು ಕ್ಯಾಮಾರಾ ಸೆಟ್ಟಿಂಗ್ ನಲ್ಲಿ ತರಬೇತಿಯನ್ನು ನೀಡಲು ಕಾಶೀನಾಥ್ ವಿ.ಎಸ್ ಆಗಮಿಸಲಿದ್ದಾರೆ, ಈ ಕಾರ್ಯಗಾರದ ಪ್ರಯೋಜನವನ್ನು ಛಾಯಾಗ್ರಾಹಕರು ಪಡೆಯುವಂತೆ ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಆನಂದ ತಿಳಿಸಿದ್ದಾರೆ. ಈ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9449167316 ದೂರವಾಣಿಯನ್ನು ಸಂಪಕರ್ಿಸುವಂತೆ ಕೋರಲಾಗಿದೆ.

