ಮುಂಬಯಿ: ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್ ಇಂದಿಲ್ಲಿ ಶನಿವಾರ ಸಂಜೆ ಮೊತ್ತಮೊದಲಾಗಿ ಬೊರಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಜೋಗರ್ಸ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ದುರ್ಗ ಪರಮೇಶ್ವರಿ ದೇವಸ್ಥಾನ ಕಟೀಲು ಇದರ ಶ್ರೀ ಅನಂತ ಪದ್ಮನಾಭ ಅಸ್ರಣ್ಣರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಹಾಯಕ ಪೋಲಿಸ್ ಆಯುಕ್ತ ಸುಧಾಕರ ಪೂಜಾರಿ ಮತ್ತು ಗೌರವ ಅತಿಥಿಗಳಾಗಿ ಸಂಸದ ಗೋಪಾಲ ಸಿ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಅಂಚನ್, ಅಸೋಸಿಯೇಶನ್ನ ಬೊರಿವ ಲಿ ದಹಿಸರ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಜಿ.ಎಂ.ಕೋಟ್ಯಾನ್, ನ್ಯಾ| ರತ್ನಾಕರ ವಿ.ಶೆಟ್ಟಿ ಅಂಧೇರಿ, ಭಾರತ್ ಬ್ಯಾಂಕ್ನ ನಿರ್ದೇಶಕರಾದ ಭಾಸ್ಕರ ಎಂ.ಸಾಲ್ಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಚಾರ್ಕೋಪ್ ಕನ್ನಡ ಸಂಘದ ಸ್ಥಾಪಕ ಸದಸ್ಯ ಎಂ.ಎಸ್ ರಾವ್, ಸಮಾಜ ಸೇವಕ ಡಾ| ಹರೀಶ್ ಶೆಟ್ಟಿ ದಹಿಸರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಕ್ಕುವಾಡಿ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಶನ್, ಚಿಕ್ಕುವಾಡಿ ಮೊಗವೀರ್ಸ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾಂದಿವಿಲಿ ಮತ್ತು ಬೊರಿವಲಿ ದಹಿಸರ್ ಸ್ಥಳೀಯ ಸಮಿತಿ, ಚಾರ್ಕೋಪ್ ಕನ್ನಡ ಸಂಘ, ತುಳು ಸಂಘ ಬೋರಿವಿಲಿ, ಕನ್ನಡ ಸಂಘ ಕಾಂದಿವಿಲಿ ಮತ್ತು ಕನ್ನಡ ಸಂಘ ಬೋರಿವಿಲಿ ಮತ್ತಿತರ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಫ್ರ್ರೆಂಡ್ಸ್ ಅಸೋಸಿಯೇಶನ್ನ ಸಂಚಾಲಕ ಶಿವರಾಮ ಕೆ.ಸಾಲ್ಯಾನ್, ಕಾರ್ಯಕ್ರಮ ಸಂಯೋಜಕರಾದ ರವಿರಾಜ್ ಕಲ್ಯಾಣ್ಫುರ್, ಪ್ರೇಮನಾಥ ಕೋಟ್ಯಾನ್ ಅವರು ಪದ್ಮನಾಭ ಅಸ್ರಣ್ಣರನ್ನು ಸನ್ಮಾನಿಸಿದರು.
ಕು| ವಿಭೂತಿ ಆರ್. ಕಲ್ಯಾಣ್ಫುರ್ ಪ್ರಾರ್ಥನೆಯೊಂದಿಗೆ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ರಜಿತ್ ಸುವರ್ಣ ವಂದಿಸಿದರು. ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಅವರ ಕಟೀಲು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶಿಸಿತು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್





