ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ಪ್ರಯತ್ನ: ಸಚಿವ ರೈ ಭರವಸೆ
ಬಂಟ್ವಾಳ:ತೀರಾ ಗ್ರಾಮೀಣ ಪ್ರದೇಶದಲ್ಲಿ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ತೀರ್ಥಕೆರೆ ಮತ್ತು ಪಾಕಶಾಲೆ ಸಹಿತ ಆವರಣಗೋಡೆ ಮತ್ತಿತರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಹಂತ ಹಂತವಾಗಿ ಅನುದಾನ ದೊರಕಿಸಿ ಕೊಡಲು ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸರ್ಕಾರದ ‘ಗ್ರಾಮ ವಿಕಾಸ ಯೋಜನೆ’ಯಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಳವಾರ ಸಂಜೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದೇ ವೇಳೆ ಬೊಲ್ಲೋಡಿ-ಕೈತ್ರೋಡಿಬೈಲು ಸಂಪರ್ಕಿಸುವ ಬದನಡಿ ಮುಂದುವರಿಕಾ ರಸ್ತೆ, ಕೈತ್ರೋಡಿ ಕ್ವಾರ್ಟರ್ಸ್-ಚಿಂಗಲಚ್ಚಿಲ್ ರಸ್ತೆ, ಕಂಬಳದಡ್ಡ-ಬುರಾಲ್ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

12btl-Badanady
ಪೂಂಜ ಕ್ಷೇತ್ರದ ಧರ್ಮದರ್ಶಿ ಅನಂತಾಚಾರ್ಯ ಅಸ್ರಣ್ಣ, ಅಕ್ರಮ -ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ಜಗದೀಶ ಕೊಯಿಲ, ಶೋಭಾ ಎನ್., ದೇವಳದ ಪ್ರಭಾರ ಆಡಳಿತಾಧಿಕಾರಿ ವೆಂಕಟೇಶ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆ.ಸುಂದರ ರಾವ್, ಮಾಜಿ ಸದಸ್ಯರಾದ ಪ್ರಕಾಶ ಜೈನ್ ಬೊಲ್ಲೋಡಿ, ಮೋಹನ್ ಕೆ.ಶ್ರೀಯಾನ್ ಕೈತ್ರೋಡಿ, ಅರ್ಚಕ ನಾಗೇಶ ರಾವ್, ಪ್ರಮುಖರಾದ ಚಂದ್ರಶೇಖರ ಆಚಾರ್ಯ, ಸುಧೀರ್ ಶೆಟ್ಟಿ, ಉದಯ ಕುಮಾರ್, ನೋಣಯ ಸಪಲ್ಯ, ಭೋಜರಾಜ ಕೊಡಂಗೆ, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ಸಚಿವರನ್ನು ಸನ್ಮಾನಿಸಿ, ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

By Suddi9

Leave a Reply

Your email address will not be published. Required fields are marked *