ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಬೇಡಿಕೆಯಾಗಿದ್ದ ಕೋಂಗಲಪಾದೆ ಹಿಂದೂ ರುದ್ರಭೂಮಿ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು. ಇಲ್ಲಿನ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ರೂ 10ಲಕ್ಷ ಮೊತ್ತದ ಅನುದಾನವನ್ನು ಶಾಸಕರ ನಿಧಿಯಿಂದ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಇಲ್ಲಿನ ಐದು ಎಕರೆ ಜಮೀನಿನಲ್ಲಿ ಸುಸಜ್ಜಿತ ಸ್ಮಶಾನ ನಿರ್ಮಿಸುವಂತೆ ಸ್ಥಳೀಯ ವಾರ್ಡ್ ಮತ್ತು ಗ್ರಾಮಸಭೆಯಲ್ಲಿ ಸ್ಥಳೀಯರಿಂದ ವ್ಯಾಪಕ ಬೇಡಿಕೆ ವ್ಯಕ್ತವಾಗಿತ್ತು.
ಇದೀಗ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಸ್ಮಶಾನ ಸುತ್ತಲೂ ಕೈತೋಟ ಮತ್ತು ಕಟ್ಟಡ ನಿರ್ಮಾಣದ ಜೊತೆಗೆ ಚಿತಾಗಾರ ನಿರ್ಮಾಣಕ್ಕೆ ರೂ 25 ಲಕ್ಷ ಮೊತ್ತದ ಕ್ರಿಯಾ ಯೋಜನೆ ಮಂಜೂರಾತಿ ಆಗಿದೆ. ಇಲ್ಲಿ ವಿಶಾಲವಾದ ಪಾರ್ಕಿಂಗ್ ಮತ್ತು ಒಳಾಂಗಣ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಅವರು ವಿವರಿಸಿದರು.

8btl-Smashana
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಚಂದ್ರಪ್ರಕಾಶ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದ ಎ. ಶಂಭೂರು, ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಪಂಚಾಯಿತಿ ಉಪಾಧ್ಯಕ್ಷೆ ರಾಜೀವಿ, ಸದಸ್ಯರಾದ ರವೀಂದ್ರ ಸಪಲ್ಯ, ವಿಶ್ವನಾಥ ಕೊಡಂಗೆಕೋಡಿ, ರಂಜಿತ್ ಕೆದ್ದೇಲು, ದೇವದಾಸ ನಾಯಿಲ, ನವೀನ್ ಪುತ್ರೋಟಿಬೈಲು, ಕಿಶೋರ್ ಶೆಟ್ಟಿ, ದಿವಾಕರ ಶಂಭೂರು, ಚಂದ್ರಾವತಿ ಪ್ರಭಾಕರ ಬಂಗೇರ, ಚಂದ್ರಾವತಿ, ತ್ರಿವೇಣಿ, ಮಾಧವ ಕರ್ಬೆಟ್ಟು, ಪ್ರಮುಖರಾದ ಕೆ.ಸಂಜೀವ ಪೂಜಾರಿ, ಎನ್.ಪ್ರಕಾಶ ಕಾರಂತ, ರಮೇಶ ಬೋರುಗುಡ್ಡೆ, ಉಮೇಶ ಮರ್ದೋಳಿ, ಬಿ.ರಘು ಸಪಲ್ಯ, ಪದ್ಮನಾಭ ಮಯ್ಯ, ಬಿ.ಎಸ್.ಅಬ್ದುಲ್ ಹಮೀದ್, ಪ್ರೇಮನಾಥ ಶೆಟ್ಟಿ, ದಿವಾಕರ ಏಲಬೆ, ಲಿಂಗಪ್ಪ ಕೊಟ್ಟಾರಿ, ಅರುಣ್ ಶೆಟ್ಟಿ, ಡಾ.ಸುಬ್ರಹ್ಮಣ್ಯ ಭಟ್, ಪದ್ಮನಾಭ ಕರ್ಬೆಟ್ಟು, ಗುತ್ತಿಗೆದಾರ ನಾಗೇಶ್, ಪಿಡಿಒ ಗಿರಿಜ ಮತ್ತಿತರರು ಉಪಸ್ಥಿತರಿದ್ದರು.
ನರಿಕೊಂಬು ವಲಯ ಕಾಂಗೆಸ್ ಸಮಿತಿ ಅಧ್ಯಕ್ಷ ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *