ವಿಟ್ಲ: ವಿದ್ಯುತ್‍ತಂತಿಯಿಂದ ಬೆಂಕಿಯುಂಡೆ ಉಗುಳಿ ರಸ್ತೆ ಬದಿಯ ಗೋ ಮಾಳ ಭೂಮಿ ಹೊತ್ತಿಉರಿದಘಟನೆ ಕೇಪು ಗ್ರಾಮದಕೊಲ್ಲಪದವುಎಂಬಲ್ಲಿ ಬುಧವಾರ ನಡೆದಿದೆ.
ಸಾರಡ್ಕ- ಪುಣಚ ಸಂಪರ್ಕಕಲ್ಪಿಸುವ ರಸ್ತೆಯ ಬದಿಯಲ್ಲಿ ಮಧ್ಯಾಹ್ನದ ವೇಳೆ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಾರ್ವಜನಿಕರುಒಟ್ಟಾಗಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಗಾಳಿಯಿಂದಾಗಿ ಹಬ್ಬುತ್ತಲೇಇತ್ತು, ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

