ಬಂಟ್ವಾಳ: ಇಲ್ಲಿನ ಪೋಲೀಸ್ ಇಲಾಖಾ ಆಶ್ರಯದಲ್ಲಿ ಸನ್ಮಾನ ಸಮಾರಂಭ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಹಾಗೂ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಪಿಎಸ್‍ಐ ಚಂದ್ರಶೇಖರಯ್ಯ, ಎಎಸ್‍ಐ ಶೇಷಪ್ಪ ಪಿ, ಹೆಡ್‍ಕಾನ್‍ಸ್ಟೇಬಲ್‍ಗಳಾದ ಹರೀಶ್ ಭಟ್, ವಾಸು, ಉಮೇಶ್, ಕಾನ್‍ಸ್ಟೇಬಲ್‍ಗಳಾದ ನವೀನ್, ಸೀತಾರಾಮ, ಧರ್ಮಪಾಲ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಹೋಟೆಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು.

ಎಎಸ್ಪಿ ರಾಹುಲ್ ಕುಮಾರ್ ಎಸ್.ಸಿ.ಸನ್ಮಾನಿಸಿ ಮಾತನಾಡಿ ಬಂಟ್ವಾಳದ ಪೋಲೀಸ್ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ವೃತ್ತಿ ಭಾಂದವರ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ಮಾದರಿಯೆನಿಸಿದೆ ಎಂದರು. ಪೋಲೀಸ್ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ತಹಶೀಲ್ದಾರ ಪುರಂದರ ಹೆಗ್ಡೆ, ಎಎಸೈ ನಂದ ಕುಮಾರ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಎಎಸೈ ಸೇಸಮ್ಮ ಸ್ವಾಗತಿಸಿದರು. ಕರೀಂ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
