ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮದ ನಾಟಿ ಎಂಬಲ್ಲಿ ಪುನರ್‍ನವೀಕರಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ಭೇಟಿ ನೀಡಿ ಇಲ್ಲಿನ ಶೇಡಿಗುರಿ-ನಾಟಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.
ಇಲ್ಲಿನ ಭಕ್ತರ ಬೇಡಿಕೆಯಂತೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶೇಡಿಗುರಿ-ನಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಂಡಿರುವುದಾಗಿ ಅವರು ತಿಳಿಸಿದರು.
ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ಬಂಗೇರ, ಪ್ರಮುಖರಾದ ಅಬ್ಬಾಸ್ ಆಲಿ, ಎನ್.ಪ್ರಕಾಶ ಕಾರಂತ, ಆಲ್ಫೋನ್ಸ್ ಮಿನೇಜಸ್, ರವೀಂದ್ರ ಸಪಲ್ಯ, ಆನಂದ ಸಾಲ್ಯಾನ್, ಕೃಷ್ಣಪ್ಪ ಪೂಜಾರಿ ನಾಟಿ, ಕೃಷ್ಣಪ್ಪ ನಾಯ್ಕ, ರಾಜೇಶ ನಾಟಿ, ಪಿ.ಎಸ್.ಅಬ್ದುಲ್ ಹಮೀದ್, ಹಿರಿಯ ಎಂಜಿನಿಯರ್ ನರೇಂದ್ರ ಬಾಬು, ಉಮೇಶ ಭಟ್, ಜಗದೀಶ ಮತ್ತಿತರರು ಉಪಸ್ಥಿತರಿದ್ದರು.4btl-Nati

By suddi9

Leave a Reply

Your email address will not be published. Required fields are marked *