ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಭೂರು ಗ್ರಾಮದ ಮುಗೇರಪಡ್ಪು ಎಂಬಲ್ಲಿ ರೂ 10ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲೊನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಆಲಿ, ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ಪ್ರಮುಖರಾದ ಎನ್.ಪ್ರಕಾಶ ಕಾರಂತ, ಆಲ್ಫೋನ್ಸ್ ಮಿನೇಜಸ್, ಆನಂದ ಸಾಲ್ಯಾನ್, ಆಲ್ಬರ್ಟ್ ಮಿನೇಜಸ್, ರವೀಂದ್ರ ಸಪಲ್ಯ, ಗೋಪಾಲ, ಭರತ್‍ರಾಜ್, ಮಧುಸೂಧನ, ದಿವಾಕರ ಏಲಬೆ, ರಾಜೇಶ್, ಹಿರಿಯ ಎಂಜಿನಿಯರ್ ನರೇಂದ್ರ ಬಾಬು, ಉಮೇಶ ಭಟ್, ಜಗದೀಶ ಮತ್ತಿತರರು ಉಪಸ್ಥಿತರಿದ್ದರು.
4btl-Mugerpadpu

By suddi9

Leave a Reply

Your email address will not be published. Required fields are marked *