ಮೂಡುಬಿದಿರೆ: ಆಳ್ವಾಸ್ ವಿರಾಸತ್ನ ಕೊನೆಯ ದಿನ ದೇಶದ ಹೆಸರಾಂತ ಗಾಯಕರಿಂದ ನಡೆದ ಸಂಗೀತ ವೈಭವ ವಿಶೇಷ ಮೆರುಗು ನೀಡಿತು. ಸಂಗೀತ ವೈಭವದಲ್ಲಿ ಮೊದಲಿಗೆ ಹಿನ್ನಲೆ ಗಾಯಕ ಕಾರ್ತಿಕ್ ಚೆನ್ನೈ ಗಣಪತಿ ಸ್ತುತಿ, ಪ್ರಾರಂಭಿಸಿದರು.

27mood Sangeeta Vaibhava (5)

27mood Sangeeta Vaibhava (1)

27mood Sangeeta Vaibhava (2)

27mood Sangeeta Vaibhava (3)

27mood Sangeeta Vaibhava (4)

ನಂತರ ತಮಿಳು, ಹಿಂದಿ ಪ್ರಸಿದ್ಧ ಚಲನಚಿತ್ರಗಳ ಹಾಡುಗಳನ್ನು ಹಾಡಿದರು. ಬಳಿಕ ಗಾಯಕ ವಿಜಯ ಪ್ರಕಾಶ್ ಅವರು ಉಳಿದವರು ಕಂಡಂತೆ ಚಲನ ಚಿತ್ರದ ಘಟ್ಟದ ಅಂಚಿದಾಯೆ..ತೆಂಕಾಯಿ ಬತ್ತ್ ತೂಯೆ’ ಎಂಬ ತುಳು ಹಾಡಿನ ಸಾಲುಗಳಿರುವ ಹಾಡು ಮತ್ತು “ಅಧ್ಯಕ್ಷ” ಚಲನಚಿತ್ರದ `ಓಪನ್ ಹೇರ್ ಬಿಟ್ಕೊಂಡು..’, `ತರವಲ್ಲ ತಗೀ ನಿನ್ನಾ ತಂಬೂರಿ ಸ್ವರ’ ಎಂಬ ಜಾನಪದ ಹಾಡು `ಯಾರೇ ನೀನು ರೋಜಾ ಹೂವೇ’ ಸಹಿತ ಹಲವು ಪ್ರಸಿದ್ಧ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು.  ಡ್ರಮ್ಸ್ನಲ್ಲಿ ಅರುಣ್ ಕುಮಾರ್, ಗಿರಿಧರ್ ಉಡುಪ-ಘಟಂನಲ್ಲಿ, ಬೇಸ್ ಗಿಟಾರ್ನಲ್ಲಿ ಕೇತ್ ಫೀಟರ್, ಲೀಡ್ ಗಿಟಾರ್ನಲ್ಲಿ ವಿಜಯ ಜೋಸೆಫ್, ತಬಲಾದಲ್ಲಿ ಪ್ರದ್ಯುಮ್ನ ಹಾಗೂ ನವನೀತ್ ಸುಂದರ್ ಮತ್ತು ಹರ್ಷಾ  ಕೀಬೋರ್ಡ್ನಲ್ಲಿ ಸಾಥ್ ನೀಡಿದರು.
ಹೀಗೆ ನಾಲ್ಕು ದಿನಗಳ ಕಾಲ ನಡೆದ ಈ ಬಾರಿಯ ವಿರಾಸತ್ನಲ್ಲಿ ಒಟ್ಟು 600 ಕಲಾವಿದರು ಸಂಗೀತ, ಸಂಗೀತ ವಾದ್ಯಗಳ ಮತ್ತು ನೃತ್ಯದ ಸವಿಯನ್ನು ಪ್ರತಿದಿನವೂ ಒಂದೂವರೆ ಲಕ್ಷ

By suddi9

Leave a Reply

Your email address will not be published. Required fields are marked *