ವೀರಪ್ಪನ್ ಸಹಚರರು, ವಾಮಂಜೂರು ಪ್ರವೀಣ, ಪಂಜಾಬ್ ಸಿಎಂ ಹಂತಕ,
ರಾಜೀವ್ ಹಂತಕಿ ನೇಣಿನ ಕುಣಿಕೆೆಯಿಂದ ಪಾರು: ಸುಪ್ರೀಂ ಮಹತ್ವದ ತೀಪರ್ು
ಸುದ್ದಿ9 ಕೈಕಂಬ:ಮರಣದಂಡನೆಗೆ ಗುರಿಯಾದ ಖೈದಿಗಳ ಕ್ಷಮಾದಾನದ ಅಜರ್ಿಗಳನ್ನು ವರ್ಷಗಟ್ಟಲೆ ವಿಳಂಬ ಮಾಡಿದ ಕೇಂದ್ರದ ವಿರುದ್ಧ ಸುಪ್ರೀಂ ಕೋಟರ್್ ಮಹತ್ವದ ತೀಪರ್ು ನೀಡಿದೆ. ಇದರಂತೆ ಗಲ್ಲಿಗೆ ಗುರಿಯಾಗಿದ್ದ ವೀರಪ್ಪನ್ ಸಹಚರರಾದ ಜ್ಞಾನ ಪ್ರಕಾಶ್, ಸೈಮನ್, ಮೀಸೆಕಾರ್ ಮಾದಯ್ಯ, ಬಿಲವೇಂದ್ರ, ರಾಜೀವ್ ಹಂತಕಿ ನಳಿನಿ, ಪಂಜಾಬ್ ಸಿಎಂ ಹಂತಕ ದೇವೇಂದರ್ ಸಿಂಗ್ ಬುಲ್ಲರ್ ಹಾಗೂ ಹಂತಕ ವಾಮಂಜೂರು ಪ್ರವೀಣ ಇವೆರೆಲ್ಲರ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವತರ್ಿಸಿ ಸುಪ್ರೀಕೋಟರ್ಿನ ಮುಖ್ಯ ನ್ಯಾಯಮೂತರ್ಿ ಸದಾಶಿವಂ ನೇತೃತ್ವದ ಪೀಠ ಮಹತ್ವದ ಆದೇಶ ನೀಡಿದೆ.
ಜೀವಾವಧಿ ಯಾಕೆ?
ಮರಣದಂಡನೆ ಶಿಕ್ಷೆಗೆ ಒಳಗಾದವರ ಕ್ಷಮಾದಾನದ ಅಜರ್ಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವತರ್ಿಸಲಾಗುತ್ತದೆ ಎಂದು ಸವರ್ೋಚ್ಛ ನ್ಯಾಯಾಲಯ ಹೇಳಿತ್ತು. ಇದೇ ರೀತಿ ಈ ಎಲ್ಲಾ ಹಂತಕರ ಕ್ಷಮಾದಾನದ ಅಜರ್ಿಗಳು ರಾಷ್ಟ್ರಪತಿಗಳ ಟೇಬಲ್ಲಿನಲ್ಲಿ ವಿಲೇವಾರಿಗಾಗಿ ಕಾಯುತ್ತಿದ್ದವು. ಇದರ ವಿಳಂಬಗತಿಯನ್ನು ಮನಗಂಡ ಸುಪ್ರೀಂ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವತರ್ಿಸಿದೆ.
ವೀರಪ್ಪನ್ ಸಹಚರರು ನೆಲಬಾಂಬ್ ಸ್ಫೋಟಿಸಿ 22 ಜರನ್ನು ಕೊಂದಿದ್ದರು. ಇದರಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೂ ಸೇರಿದ್ದರು.
ವಾಮಂಜೂರಿನ ಪ್ರವೀಣ ಉಪ್ಪಿನಂಗಡಿಯವನು. ವಾಮಂಜೂರಿನ ಅತ್ತೆಮನೆಗೆ ಬಂದಿದ್ದ ಈತ ಹಣ ಮತ್ತು ಬಂಗಾರಕ್ಕೋಸ್ಕರತನ್ನ ಅತ್ತೆ ಅಪ್ಪಿ, ಸೇರಿದಂತೆ ಆಕೆಯ ಮಕ್ಕಳನ್ನು ಸೇರಿ 4 ಜನರನ್ನು ಕೊಂದಿದ್ದ.
ಶಿವು, ಜಡೆಸ್ವಾಮಿ ಎಂಬಿಬ್ಬರು ಚಾಮರಾಜನಗರದ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು.
ಇನ್ನು ದೇವೇಂದರ್ ಸಿಂಗ್ ಬುಲ್ಲರ್ ಪಂಜಾಬ್ ಸಿಯಂ ಆಗಿದ್ದ ಮನಿಂದರ್ಜೀತ್ ಸಿಂಗ್ ಬಿಟ್ಟ
ಇನ್ನು ಮಾಜೀವ್ ಪ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿಗೂ ಜೀವಾವಧಿ ಶಿಕ್ಷೆಗೊಳಪಡಲಿದ್ದಾಳೆ. ಜೊತೆಗೆ ರಾಜೀವ್ ಹತ್ಯೆಯಲ್ಲಿ ಪಾಲ್ಗೊಂಡ ಮುರುಗನ್, ಅರಿವು, ಸಂತನು ಇವರ ಕ್ಷಮಾಧಾನದ ಅಜರ್ಿ ವಿಳಂಬವಾಗಿದ್ದು ಇವರು ಕೂಡಾ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.
ಜೀವನ ಪರ್ಯಂತ ಬಂಧಮುಕ್ತ: ಜೀವಾವಧಿ ಎಂದರೆ 16ರಿಂದ 20 ವರ್ಷ ಜೈಲು ಶಿಕ್ಷೆಯಲ್ಲ, ಜೀವನಪರ್ಯಂತ ಜೈಲಿನಲ್ಲೇ ಕಳೆಯಬೇಕು ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.
ಸುಪ್ರೀಕೋಟರ್್ ತೀಪೀನಿಂದ ಹಂತಕರ ಕೆಲವು ಮನೆಯವರಿಗೆ ನೆಮ್ಮದಿ ತಂದರೆ ಇವರಿಂದ ತೊಂದರೆ ಅನುಭವಿಸಿದವರಿಗೆ ನಿರಾಸೆ ತಂದಿದೆ.

Veerappan_aides_with_names_295 Davinder_Pal_Singh_Bhullar vamnuru pravin

By suddi9

Leave a Reply

Your email address will not be published. Required fields are marked *