ವಿಟ್ಲ: ಚಂದಳಿಕೆಯ ದ ಕ ಜಿ ಪಂ ಸ ಹಿ ಪ್ರಾ ಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ 2015- 2016, ಪುತ್ತೂರು ಇಂಡಸ್ ಕಾಲೇಜು ಇದರ ನೇತೃತ್ವದಲ್ಲಿ `ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ’ ಎಂಬ ಶಿರೋನಾಮೆಯಲ್ಲಿ ನಡೆದ ಎನ್ ಎಸ್ ಎಸ್ ಎಂಟನೇ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭವು ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
nss (1)

nss (2)

ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಕಾಲೇಜಿನ ಅಧ್ಯಕ್ಷ ಬಿ ರವೀಂದ್ರ ರೈ ಮಾತಾಡಿ `ವೈಯಕ್ತಿಕ ಹಿತಕ್ಕಿಂತ ಸಮುದಾಯದ ಹಿತ ಮುಖ್ಯ, ಸೇವೆಯೇ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಸೇವೆಗೆ ಹೆಚ್ಚು ಮಹತ್ವ ಕೊಟ್ಟು, ಸೇವೆಯಿಂದ ಸಂತೋಷ ಕಾಣಿರಿ’ ಎಂದರು. ಮುಖ್ಯ ಅತಿಥಿಗಳಾಗಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ವಿಜಯಕರ್ನಾಟಕ ಪತ್ರಿಕಾ ವರದಿಗಾರ ವಿಷ್ಣುಗುಪ್ತ ಪುಣಚ, ಶ್ರವಣ ಜುವೆಲ್ಲರ್ಸ್ನ ಕೆ ಸದಾಶಿವ ಆಚಾರ್ಯ, ವಿಟ್ಲ ಸಿ ಆರ್ ಪಿ ಶಿವರಾಮ ಭಟ್, ಕಾರ್ತಿಕ್ ಫ್ರೆಂಡ್ಸ್ ನ ಗಂಗಾಧರ ಸಿ ಹೆಚ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭವಾನಿ ರೈ, ಶಿಕ್ಷಕಿ ಪುಷ್ಪಾವತಿ ಭಾಗವಹಿಸಿದ್ದರು. ಶಿಬಿರಾಧಿಕಾರಿ ಕಿಶೋರ್ ಕುಮಾರ್ ರೈ ವೇದಿಕೆಯಲ್ಲಿದ್ದು ಶಿಬಿರದ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ವಸತಿ ಮತ್ತು ಮೂಲ ಸೌಕರ್ಯ ಒದಗಿಸಿದ ಸ್ಥಳೀಯರಾದ ಸದಾಶಿವ- ವಾರಿಜ ದಂಪತಿಗಳನ್ನು ಸನ್ಮಾನಿಸಲಾಯಿತು. ಹಾಗೂ ಇತರ ರೀತಿಯಲ್ಲಿ ಸಹಕರಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಿಬಿರಾರ್ಥಿಗಳಾದ ಶರತ್(ನಾಯಕ), ರಮ್ಯ, ಅನ್ಸಾರ್ ಕೆ, ಸ್ವಾತಿ(ನಾಯಕಿ), ಸಮ್ಮಾಝ್ ಮತ್ತು ಇಷರ್ಾದ್ ಅನಿಕೆ ವ್ಯಕ್ತ ಪಡಿಸಿದರು. ಕಾಲೇಜಿನ ನಿರ್ದೇಶಕ ಬಿಂದುಸಾರ ಶೆಟ್ಟಿ ಪ್ರಸ್ತಾವಿಸಿದರು. ಉಬೈದ್ ಸ್ವಾಗತಿಸಿದರು. ಇಷರ್ಾದ್ ವಂದಿಸಿದರು. ಉಪನ್ಯಾಸಕ ದಿನಕರ್ ಅಂಚನ್ ನಿರೂಪಿಸಿದರು. ರಮ್ಯಾ ಸಹಕರಿಸಿದರು

By suddi9

Leave a Reply

Your email address will not be published. Required fields are marked *