ವಿಟ್ಲ: ವಿಟ್ಲ ಮದರಿ ಶಾಲೆಯಲ್ಲಿ ದ ಕ ಜಿ ದಲಿತ್ ಸೇವಾ ಸಮಿತಿ ಮತ್ತು ವಿಟ್ಲ ಪೋಲಿಸ್ ಠಾಣೆ ಇದರ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಪ ಜಾ ಪಂಗಡ ಪೋಲಿಸ್ ಜನ ಸಂಪರ್ಕ ಸಭೆಯನ್ನು ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟ್ವಾಳ ವೃತ್ತ ನಿರೀಕ್ಷಕ ಬೆಳಿಯಪ್ಪ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಹಲವಾರು ಅತ್ಯಾಚಾರ ಪ್ರಕರಣ, ಕೊಲೆ, ಕಳ್ಳತನ ಪ್ರಕರಣ ಭೇದಿಸಿದ ವಿಟ್ಲ ಠಾಣೆಯ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಯವರನ್ನು ಅಭಿನಂದನಾ ಪತ್ರನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಗೌರವ ಸಲಹೆಗಾರ ರಾಮಣ್ಣ ಪಿಲಿಂಜ, ಕಾರ್ಯದರ್ಶಿ ಚಂದ್ರಶೇಖರ್. ಪಿ ಜಿ ಸುರೇಸ್ ಪೆರುವಾಯಿ, ಸುಳ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ, ಸದಾಶಿವ ಕೇಪು, ಸಿಐಟಿಯು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು. ಚಂದ್ರಶೇಖರ ನಿರೂಪಿಸಿದರು. ಪ್ರಸಾದ್ ಅನಂತಾಡಿ ವಂದಿಸಿದರು.
