ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಾಳ್ತಿಲ ಹಾಗೂ ಕಲ್ಲಡ್ಕ ಇದರ ಜಂಟಿ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಬೊಳಂತೂರು ನರಿಕೊಂಬು ಇಲ್ಲಿ 2015-16 ನೇ ಸಾಲಿನ ಕ್ಲಸ್ಟರ್ ಮಟ್ಟದ ಪಡೇ ಭಾರತ್ನ ಕಾರ್ಯಕ್ರಮಗಳಾದ ಓದು, ಬರಹ ಅಭಿವ್ಯಕ್ತಿ ಕಾರ್ಯಕ್ರಮವು ಜರುಗಿತು.
ಕೇಂದ್ರ ಸರಕಾರವು ರೂಪಿಸಿರುವ ಪಡೇ ಭಾರತ್ ಬಡೇ ಭಾರತ್ ( ಓದಿನ ಹಿರಿಮೆಯೇ ಭಾರತದ ಗರಿಮೆ) 2015-16 ನೇ ಸಾಲಿನ ವಿಶಿಷ್ಟ ಕಾರ್ಯ ಯೋಜನೆಯಾಗಿದ್ದು ಮಕ್ಕಳಲ್ಲಿ ಅರ್ಥಗ್ರಹಿಕೆಯೊಂದಿಗೆ ಓದುವ, ಬರೆಯುವ ಕೌಶಲ ಅಭಿವೃದ್ಧಿ ಮತ್ತು ಆರಂಭಿಕ ಗಣಿತದಲ್ಲಿ ಬೆಳವಣಿಗೆಯ ಉದ್ದೇಶಕ್ಕಾಗಿ ರೂಪಿತಗೊಂಡಿದ್ದು ಶಾಲಾ ಹಂತ, ಕ್ಲಸ್ಟರ್ ಹಂತ, ಬ್ಲಾಕ್ ಹಂತದಲ್ಲಿ ಓದುವ, ಬರೆಯುವ ಮತ್ತು ಅಭಿವ್ಯಕ್ತ ಪಡಿಸುವ ವಿಷಯಗಳಲ್ಲಿ ಸ್ಪರ್ಧೆಗಳನ್ನು ನೆರವೇರಿಸಿ ಮಕ್ಕಳ ಸಾಮಥ್ರ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ.

ಶಿಕ್ಷಣವೇ ಶಕ್ತಿ ಶಾಲೆಗಳೇ ಅದರ ಸ್ಫೂರ್ತಿ , ಪ್ರತಿಯೊಂದು ವಿದ್ಯಾರ್ಥಿಯು ಪ್ರತಿಭಾನ್ವಿತ ಅವರಲ್ಲಿ ಹುದುಗಿರುವ ಸಾಮಥ್ರ್ಯಗಳನ್ನು ಹೊರಗೆಡವಲು ಇಂತಹ ವೇದಿಕೆಗಳು ಒಳ್ಳೆಯ ಅವಕಾಶ ಕೊಡುತ್ತಿವೆ. ಅದನ್ನು ಉತ್ತಮವಾಗಿ ಬಳಸಿಕೊಂಡು ನಮ್ಮ ಸಾಮಥ್ರ್ಯಗಳನ್ನು ತಿಳಿಯ ಪಡಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವು ವಿಜಯ ಪತಾಕೆಯಾದರೆ ಸೋಲೇ ಗೆಲುವಿನ ಮೆಟ್ಟಲಾಗಬೇಕೆಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ನರಿಂಗಾನ ಬೊಳಂತೂರು ಶಾಲೆಯ ಶಶಾಂಕರವರು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಿಕರಾಗಿದ್ದ ಸದ್ರಿ ಶಾಲೆಯ ಶಾಲಾ ಉಪನಾಯಕಿ ಹಾಗೂ ಮೀನಾ ತಂಡದ ಅಧ್ಯಕ್ಷೆ ಕು| ನವ್ಯಶ್ರೀರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕೆಲಿಂಜದ ತೃಪ್ತಿ ಕೆ ರೈ, ಮಜಿ ಶಾಲೆಯ ಸಿಂಚನ, ನೆಟ್ಲದ ಸುಶ್ಮಿತ, ಕಲ್ಲಡ್ಕದ ಸಿನಾನ, ಬೋಳಂತೂರಿನ ಶರಣ್ಯ, ಗೋಳ್ತಮಜಲಿನ ರಚಿತ, ಬಾಳ್ತಿಲದ ಸೋನಲ ಕೊರೆಯ, ನರಿಕೊಂಬಿನ ಮೋನಿಶಾ, ಶಂಭೂರಿನ ಪವನ್ ಕುಮಾರ್, ನಾಯಿಲದ ಪ್ರತೀಕ್ಷಾರವರು ಅತಿಥಿಗಳಾಗಿ ಭಾಗವಹಿಸಿದ್ದು ತಮ್ಮ ಮಾತಿನ ಮೂಲಕ ಶುಭ ಹಾರೈಸಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಚಂದಗಾಣಿಸಿದರು.
ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯರಾದ ಉಮೇಶ ಬೋಳಂತೂರು, ನರಿಕೊಂಬು ಗ್ರಾಮ ಪಂಚಾಯತ್ನ ಅಧ್ಯಕ್ಷರಾಧ ಕಿಶೋರ್ ಶೆಟ್ಟಿ ಸದಸ್ಯೆ ತ್ರಿವೇಣಿ, ನಿಕಟ ಪೂರ್ವ ಉಪಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಎಸ್.ಡಿ.ಎಂ.ಸಿ ಅಧ್ಯಕ್ಷರಾಧ ಮೋಹನ್, ಶಿಕ್ಷಣ ಸಂಯೋಜಕಿ ಪುಷ್ಪಾ, ಸಮೂಹ ಸಂಪನ್ಮೂಲ ಕೇಂದ್ರ ವ್ಯಕ್ತಿ ಶ್ರೀಯುತ ಉದಯ ಕುಮಾರ್, ಸರಕಾರಿ ಶಾಲಾಪ್ರಾಥಮಿಕ ಸಂಘದ ಸದಸ್ಯರಾದ ಶ್ರೀಯುತ ಡೇನಿಯಲ್ ಕಾರ್ಲೋ , ನಾರಾಯಣಪೂಜಾರಿ, ಸಂತೋಷರವರು ಭಾಗವಹಿಸಿದ್ದು ಶುಭ ಹಾರೈಸಿದರು.
ಶಿಕ್ಷಕಿ ಶರ್ಮಿಳಾ ಸ್ವಾಗತಿಸಿ ಪ್ರೆಸಿಲ್ಲಾ ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ನವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.
