ಕಟೀಲು : ಅನುದಾನಿತ ಶ್ರೀ ದು. ಪ.ದೇ. ಹಿ.ಪ್ರಾ. ಶಾಲೆಯ ಶತಮಾನೋತ್ಸವ ಪ್ರಯುಕ್ತ ಪ್ರತಿ ತಿಂಗಳು ನಡೆಯುವ ರಾಮಾಯಣ ಕಥಾ ಮಾಲಿಕೆಯಲ್ಲಿ ವಿಭೀಷಣನ ಪಾತ್ರದ ಬಗ್ಗೆ ಯಕ್ಷಗಾನ ಕಲಾವಿದ ಮಾಧವ ಕೊಳತ್ತಮಜಲು ಉಪನ್ಯಾಸವಿತ್ತರು. ಸತ್ಯ, ತತ್ವ, ಧರ್ಮ, ನೀತಿಗಳ ಬಗ್ಗೆ ನಿಷ್ಟೆಯಿಂದ ತನ್ನಣ್ಣ ರಾವಣ ಮಾಡುತ್ತಿದ್ದ ಅಧರ್ಮವನ್ನು ಧಿಕ್ಕರಿಸಿ ಶ್ರೀರಾಮನನ್ನು ಸೇರಿದ ವಿಭೀಷಣನ ಬಗ್ಗೆ ಅವರು ಮಾತನಾಡಿದರು.

ಮುಖ್ಯೋಪಾಧ್ಯಾಯ ಗೋಪಾಲ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ವೆಂಕಟರಮಣ ಹೆಗಡೆ, ಕೃಷ್ಣ ಮತ್ತಿತರಿದ್ದರು.
