ಬಂಟ್ವಾಳ; ಬಂಟ್ವಾಳದಲ್ಲಿ ಮಳೆ ಬಂತೆಂದರೆ, ಅಂಗಡಿ ಬಾಗಿಲಿಗೆ ನೀರು, ರಸ್ತೆಯಲ್ಲಿ ನೀರು, ಮಳೆ ನೀರು ಹರಿಯಲು ಚರಂಡಿಯಿಲ್ಲ, ಇದ್ದ ಚರಂಡಿಯೂ ಬ್ಲಾಕ್, ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..
ಹೀಗೆ ಬಿ.ಸಿ.ರೋಡು ಪೇಟೆ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಪುರಸಭಾ ಆಡಳಿತ ಮಳೆಗಾಲವನ್ನು ಎದುರಿಸಲು ಸನ್ನದ್ದವಾಗದಿರುವುದು ಇದಕ್ಕೆ ಮುಖ್ಯ ಕಾರಣ.
ಇಲ್ಲಿನ ಸಮಸ್ಯೆ ಇಂದು ನಿನ್ನೆಯದಲ್ಲ ಅದು ಹಲವಾರು ವರ್ಷಗಳದ್ದೇ ಆದರೂ ಮತ್ತೆ ಮತ್ತೆ ಮಾಧ್ಯಮಗಳು ಎಚ್ಚರಿಸಿದರೂ ಸಂಬಂದಪಟ್ಟ ಇಲಾಖೆ ಮಾತ್ರ ಕ್ಯಾರೇ ಆನ್ನುವುದಿಲ್ಲ ಎನ್ನುವುದು ಇಲ್ಲಿನ ಆಡಳಿತಕ್ಕೆ ಸವಾಲಾಗಿದೆ.
ಏನಾಗಿದೆ..
ಮನೆಗಳಲ್ಲೂ ಕೂಡ ಮಳೆಗಾಲಕ್ಕೆ ಮುನ್ನ ನೀರು ಹೋಗುವ ಚರಂಡಿ ರಿಪೇರಿ, ಛಾವಣಿ ನೀರಿನ ಸರಾಗ ಹರಿಯುವಿಕೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡುವುದನ್ನು ಕಂಡಿದ್ದೇವೆ. ಆದರೆ ಬಂಟ್ವಾಳ ಪುರಸಭೆ ಕನಿಷ್ಠ ಈ ಬಗೆಯ ಸಿದ್ದತೆಯನ್ನು ತನ್ನ ವ್ಯಾಪ್ತಿಯಲ್ಲಿ ಮಾಡದಿರುವುದು ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ.
ಮೊದಲೇ ಸಾಕಷ್ಟು ಅವ್ಯವಸ್ಥೆಗಳಿಂದ ಸುದ್ದಿ ಮಾಡಿರುವ ಬಿಸಿ.ರೋಡಿನ ಮೇಲ್ಷೇತುವೆ ಹಾಗೂ ಇಲ್ಲಿನ ಸರ್ವೇಸ್ಸ್ ರಸ್ತೆಗಳೂ ಈಗ ಮತ್ತೆ ಜನತೆಗೆ ಸಂಕಟವನ್ನುಂಟುಮಾಡುತ್ತಿದೆ.

1 (5)

2 (3)

7ರಿಕ್ಷಾ ನಿಲ್ದಾಣ, ಬಸ್ ನಿಲ್ದಾಣಗಳೆಂದು ಗುರುತಿಸಿರುವ ಪ್ರದೇಶಗಳಂತೂ ಕೆಸರು ಗದ್ದೆಯಾಗಿ ಮಾಪರ್ಾಡು ಹೊಂದಿದೆ. ಚರಂಡಿ ಇಲ್ಲದಿರುವುದರಿಂದ ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇದ್ದ ಚರಂಡಿಯ ಸ್ಲ್ಯಾಬ್ ಗಳೂ ಚರಂಡಿಯೊಳಗೆ ಬಿದ್ದು, ಚರಂಡಿಯೂ ಬ್ಲಾಕ್ ಆಗಿದೆ.
ಬಿ.ಸಿ.ರೋಡಿನಲ್ಲಿ ಸಮರ್ಪಕವಾದ ಬಸ್ ನಿಲ್ದಾಣ ಇಲ್ಲದಿರುವುದರಿಂದ ಬಸ್ ಗಾಗಿ ಕಾಯುವವರು ಮಳೆಯಲ್ಲಿಯೇ ಕೊಡೆ ಹಿಡಿದು ನಿಲ್ಲಬೇಕಾಗಿದೆ, ಹೀಗಾಗಿ ಮಳೆಯ ನೀರಲ್ಲಿ ಅವರು ಒದ್ದೆಯಾಗುವುದಂತೂ ಗ್ಯಾರಂಟಿ.
ಮೆಲ್ಸೇತುವೆಯ ಮೇಲೆ ವಾಹನಗಳು ಹೋದರೆ ಸೇತುವೆಯ ಕೆಳಗಿನವರಿಗೆ ನೀರ ಅಭಿಷೇಕ ಇಲ್ಲಿ ಖಾಯಂ. ಮೇಲ್ಸೇತುವೆಯ ಒಂದೆಡೆ ನೀರು ನಿಲ್ಲುತ್ತಿದ್ದು, ಅದರ ಮೇಲೆ ಚಲಿಸುವ ವಾಹನಗಳು ಆಗಾಗ್ಗೆ ನೀರ ಅಭಿಷೇಕ ಮಾಡುತ್ತಿದೆ.
ಪುರಸಭಾ ಆಡಳಿತ ಇನ್ನೂ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸದ ಕಾರಣದಿಂದ ಅಲ್ಲಲ್ಲಿ ರಾಶಿಬಿದ್ದಿರುವ ತ್ಯಾಜ್ಯವಸ್ತುಗಳು ಮಳೆನೀರಿನ ಜೊತೆಯಲ್ಲಿ ಎಲ್ಲೆಡೆ ಹರಡಿ ಇನ್ನಷ್ಟು ತೊಂದರೆ ನೀಡುತ್ತಿದೆ. ಬಿ.ಸಿ.ರೋಡಿನ ಪೊಲೀಸ್ ಠಾಣಾ ರಸ್ತೆ ಪಕ್ಕ, ನ್ಯಾಯಾಲಯದ ಆವರಣದ ಹೊರಭಾಗದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಸ್ಥಳೀಯ ಪರಿಸರದಲ್ಲಿ ಮೂಗು ಮುಚ್ಚಿಕೊಳ್ಳುವಂತಾ ಸ್ಥಿತಿ ಉಂಟುಮಾಡಿದೆ.

ಇಲ್ಲಿ ಪುರಸಭೆ ಮತ್ತು ಹೆದ್ದಾರಿ ಪ್ರಾಧಿಕಾರದ ನಡುವಣ ತಿಕ್ಕಾಟಗಳು ನಾಗರೀಕರಿಗೆ ಸಮಸ್ಯೆಯಾಗಿದೆ. ಕಿರಿದಾದ ಸವರ್ೀಸ್ ರಸ್ತೆಗಳ ಪಕ್ಕದಲ್ಲಿ ನೀರು ಹರಿಯುವ ಚರಂಡಿ ಬೇಕು, ಸವರ್ೀಸ್ ರಸ್ತೆ ಸರಿಯಾದ ಸ್ಥಿತಿಯಲ್ಲಿರಬೇಕು ಎಂದು ಹಿಂದೊಮ್ಮೆ ಜಿಲ್ಲಾಧಿಕಾರಿಯವರೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮೇಲ್ಸೇತುವೆ ಗುತ್ತಿಗೆ ಸಂಸ್ಥೆ ಇರ್ಕಾನ್ ಅಧಿಕಾರಿಗಳಿಗೆ ಸೂಚಿಸಿದ್ದರು. ಬಂಟ್ವಾಳ ಪುರಸಭೆ ಮೇಲ್ಸೇತುವೆ ಪಕ್ಕದ ಸರ್ವೇಸ್ ರಸ್ತೆಯನ್ನು ದುರಸ್ತಿ ಗೊಳಿಸವುದು ಹಾಗೂ ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದನ್ನು ಹೊರತು ಪಡಿಸಿದರೆ, ಇಲ್ಲಿ ಚರಂಡಿ ನಿರ್ಮಾಣಗೊಳ್ಳಲೇ ಇಲ್ಲ.

5

 

5 (1)

2 (5)

6

 

By suddi9

Leave a Reply

Your email address will not be published. Required fields are marked *