ಬಜಪೆ: ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅವರು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

ಮಂಗಳೂರು ತಾಲೂಕು ಎಪಿಎಂಸಿ ಆವರಣದಲ್ಲಿ ಬುಧುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ದ.ಕ ಜಿಲ್ಲೆಯ ಎಪಿಎಂಸಿಗಳ ಪ್ರತಿನಿಯಾಗಿ ಅವರು ರಾಜ್ಯ ಸಮಿತಿಗೆ ಆಯ್ಕೆಯಾಗಿರುವುದನ್ನು ಚುನಾವಣಾ ಅಕಾರಿಯೂ ಆಗಿದ್ಧ ದ.ಕ ಜಿಲ್ಲಾ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ರೆಡ್ಡಿ ಅವರು ಪ್ರಕಟಿಸಿ ಆಯ್ಕೆ ಪತ್ರವನ್ನು ಮೋನಪ್ಪ ಶೆಟ್ಟಿ ಅವರಿಗೆ ನೀಡಿದರು.
ಪ್ರತಿಷ್ಠಿತ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಮಂಗಳೂರು ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘಗಳ ಅಧ್ಯಕ್ಷರೂ ಆಗಿರುವ ಮೋನಪ್ಪ ಶೆಟ್ಟಿ ಅವರು ಅನೇಕ ಸಹಕಾರಿ ಸಂಸ್ಥೆಗಳಲ್ಲಿ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ಧಾರೆ.
ಮಂಗಳೂರು ತಾಲೂಕು ಎಪಿಎಂಸಿ ಮಂಗಳೂರು ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಕೂಳೂರು ಹಾಗೂ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಗಳವರು ಮೋನಪ್ಪ ಶೆಟ್ಟಿ ಅವರನ್ನು ಅಭಿನಂದಿಸಿರುತ್ತಾರೆ
