ಬಂಟ್ವಾಳ: ದೇಶದಲ್ಲಿ ಐಸಿಸ್ ಉಗ್ರರು ಲಗ್ಗೆಯಿಟ್ಟು ಇಲ್ಲಿನ ಯುವಕರನ್ನು ವಿವಿಧ ಆಮಿಷವೊಡ್ಡಿ ತನ್ನೆಡೆಗೆ ಸೆಳೆದುಕೊಳ್ಳಲು ಹವಣಿಸುತ್ತಿದ್ದರೂ ಸರ್ಕಾರ ಮಾತ್ರ ನಿದ್ದೆಯಲ್ಲಿದೆ.ಇಲ್ಲಿನ ಸೈನಿಕರಿಗಿಂತಲೂ ಐಸಿಸ್ ಉಗ್ರರ ತಂಡವು ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದು, ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬಲಿ ತೆಗೆದುಕೊಳ್ಳಲು ಹವಣಿಸುತ್ತಿದ್ದರೂ ಇದಕ್ಕೆ ಪ್ರತಿಯಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷದ ಸದಸ್ಯರು ಆಡಳಿತ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತುಂಬೆಯಲ್ಲಿ ನಡೆದಿದೆ.7btl-Thumbay

ಇಲ್ಲಿನ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ‘ಯುವ ಸಂಸತ್ ಅಣಕು ಸ್ಪರ್ಧೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಶ್ನೋತ್ತರ ವೇಳೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಗಮನ ಸೆಳೆದರು. ಇದೇ ವೇಳೆ ಸಂಸತ್ತಿನ ಮಾದರಿಯಲ್ಲೇ ಆಡಳಿತ ಮತ್ತು ವಿರೋಧ ಪಕ್ಷ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ಮತ್ತು ಆರೋಪ-ಪ್ರತ್ಯಾರೋಪ ನಡೆಯಿತು.

ದೇಶದ ಆಂತರಿಕ ಭದ್ರತೆ ಮತ್ತು ರಕ್ಷಣೆ ಸಹಿತ ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ಅತ್ಯಾಚಾರ, ಗೋಹತ್ಯೆ ನಿಷೇಧ, ಅಸಹಿಷ್ಣುತೆ, ಕಳಸ-ಬಂಡೂರಿ ಯೋಜನೆ, ಬಾಲ ಕಾರ್ಮಿಕ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಎತ್ತಿದ ವಿವಿಧ ಖಾರವಾದ ಆಕ್ರೋಶ ಭರಿತ ಪ್ರಶ್ನೆಗಳಿಗೆ ಗೃಹ ಮತ್ತು ರಕ್ಷಣಾ ಸಚಿವರು ಸೇರಿದಂತೆ ಹಣಕಾಸು, ಸಾಮಾಜಿಕ ನ್ಯಾಯ ಮತ್ತು ಬಲವರ್ಧನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ಕೃಷಿ, ಜಲ ಸಂಪನ್ಮೂಲ, ವಿದೇಶಾಂಗ, ಕಾರ್ಮಿಕ ಮತ್ತು ಉದ್ಯೋಗ, ಮಾನವ ಸಂಪನ್ಮೂಲ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ರೈಲ್ವೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪ್ರವಾಸೋದ್ಯಮ ಸಚಿವರು ಉತ್ತರಿಸಲು ತಡವರಿಸಿದಂತೆ ಕಂಡು ಬಂತು.

ತುಂಬೆ ಕಾಲೇಜು ಮಾತ್ರವಲ್ಲದೆ ಮೂಡುಬಿದ್ರೆ ಆಳ್ವಾಸ್ ಕಾಲೇಜು, ಮಂಗಳೂರು ಸೈಂಟ್ ಆ್ಯಂಗ್ನೆಸ್ ಕಾಲೇಜು, ಉಜಿರೆ ಎಸ್ಡಿಎಂ ಕಾಲೇಜು, ಮಂಗಳೂರು ರಥಬೀದಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಗಳೂರು ಬಿಇಎಂ ಪದವಿ ಪೂರ್ವ ಕಾಲೇಜು, ಬಿ.ಸಿ.ರೋಡ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೆಲ್ಕಾರ್ ಪದವಿ ಪೂರ್ವ ಕಾಲೇಜು, ಮಂಗಳೂರು ಗೋಕರ್ಣನಾಥ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *