ಬಂಟ್ವಾಳ: ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮಹತ್ವದ ಚುನಾವಣೆಗಳೆಂದು ಅರಿತುಕೊಂಡು, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಪ್ರತಿಯೊಬ್ಬರು ಗ್ರಾಮಕ್ಕೆ ತೆರಳಿ ಕಾಯಕರ್ತರನ್ನು ಸಂಘಟಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
DSC_0644

DSC_0643 (2)

ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ಕಾಂಗ್ರೆಸ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದ್ಯಾಂತ ಮೋದಿ ಅಲೆ ಕಡಿಮೆಯಾಗುತ್ತಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ದ ಜನರಿಗೆ ಭ್ರಮನಿರಸನವಾಗಿರುವುದಕ್ಕೆ ಬಿಹಾರದ ಚುನಾವಣೆಯೇ ಸಾಕ್ಷಿಯಾಗಿದೆ. ದೇಶದ್ಯಂತ ಅಸಹಿಷ್ಣುತೆ ಹಾಗೂ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕೇಂದ್ರ ಸಕರ್ಾರ ವಿರೋಧಿ ಧೋರಣೆ ತಳೆದಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಜಿ.ಪಂ.ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಮತ್ತೊಮ್ಮೆ ಕಾಂಗ್ರೆಸ್ನ ಗೆಲುವನ್ನು ಅನಾವರಣಗೊಳಿಸ ಬೇಕು ಎಂದರು.

ಮೀಸಲಾತಿಯ ಮೂಲಕ ಎಲ್ಲ ವರ್ಗದ ಜನರಿಗೂ ಅಧಿಕಾರಕ್ಕೆರುವ ಅವಕಾಶವನ್ನು ಒದಗಿಸಿಕೊಟ್ಟಿದ್ದು ಕಾಂಗ್ರೆಸ್ ಸಕರ್ಾರ. ಇದರ ಕೊಡುಗೆಯಾದ ಬ್ಯಾಂಕ್ಗಳ ರಾಷ್ಟ್ರೀಕರಣದಿಂದಾಗಿ ಜಾಗತಿಕ ಆರ್ಥಿಕ ಕುಸಿತ ಉಂಟಾದಗಲೂ ಭಾರತದ ಯಾವುದೇ ಬ್ಯಾಂಕ್ ನಷ್ಟ ಅನುಭವಿಸದೇ ಆರ್ಥಿಕ ಸ್ಥಿರತೆ ಕಾಪಾಡಿಕೊಂಡಿತ್ತು. ಜವಾಹಾರ್ಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡಿದ್ದರೂ ಜನಸಂಘ ಹಾಗೂ ಬಿಜೆಪಿ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿದ್ದವು, ಮತದಾನದ ಹಕ್ಕು, ಬಡವರಿಗೆ ದರ್ಖಾಸ್ಸು ನೀಡುವ ಯೋಜನೆ, ಬೀಡಿ ಮಜೂರಿಗಳಿಗೆ ಬೋನಸ್ ನೀಡುವುದು, ಹೆರಿಗೆ ಭತ್ಯೆ, ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ, ಅಕ್ಷರ ದಾಸೋಹ ಮೊದಲಾದ ಜನಪ್ರಿಯ ಯೋಜನೆಗಳು ಜಾರಿಗೆ ಬಂದಿರುವುದು ಕಾಂಗ್ರೆಸ್ ಸಕರ್ಾರದ ಆಡಳಿತದಲ್ಲಿ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ವೇದಿಕೆಯಲ್ಲಿದ್ದರು.

By Suddi9

Leave a Reply

Your email address will not be published. Required fields are marked *