ಬಂಟ್ವಾಳ:ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆಯಾಗಿದ್ದು ಸಮಾಜದ ಎಲ್ಲರಿಗೂ ಗೌರವದ ಬದುಕು ಸಾಧ್ಯವಾಗಿದೆ. ಡಾ|ವೀರೇಂದ್ರ ಹೆಗ್ಗಡೆ ಅವರ ಗ್ರಾಮಾವೃದ್ಧಿಯ ಪರಿಕಲ್ಪನೆಯಿಂದ ಕ್ರಾಂತಿಯಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ಡಿ.6 ರಂದು ಭಾನುವಾರ ಬಂಟ್ವಾಳ ತಾಲೂಕು ಮೂರ್ಜೆ ದ.ಕ.ಜಿ.ಪಂ.ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಗ್ಗ ವಲಯದ ಪಿಲಾತಬೆಟ್ಟು-ಬಡಗಕಜೆಕಾರು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಹಾಗೂ ಹೇಮಾವತಿ ವಿ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಒಕ್ಕೂಟಗಳ ನೂತನ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಗತಿ ಸಾಧಿಸಿದಂತೆ ಸಂಬಂಧಗಳನ್ನು ಕಳಕೊಳ್ಳಬಾರದು.ಆ ಮೂಲಕ ಗೌರವವನ್ನು ಉಳಿಸಿಕೊಂಡು ಸ್ವಸಹಾಯ ಸಂಘಗಳು ಶಿಸ್ತುಬದ್ಧವಾಗಿ ಮತ್ತಷ್ಟು ಬೆಳೆಯಬೇಕು.ಜನಧನ್,ಅಟಲ್ ಪೆನ್ಷನ್ ಯೋಜನೆಗಳ ಮೂಲಕ ಜನರ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯವನ್ನು ತಲುಪಿಸುವ ಕಾರ್ಯವನ್ನು ಸಿಂಡಿಕೇಟ್ ಬ್ಯಾಂಕ್ ಸಹಕಾರದಲ್ಲಿ ಯೋಜನೆ ಮಾಡುತ್ತಿದೆ ಎಂದು ಹೇಳಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಹಿಂಗಾರ ಅರಳಿಸಿ ಒಕ್ಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಮದ್ಯವರ್ಜನ ಮೊದಲಾದ ಸಮಾಜಮುಖಿ ಚಿಂತನೆಗಳಿಂದ ಹಿಂದುಳಿದ ವರ್ಗ ಅಭಿವೃದ್ಧಿ ಹೊಂದಲು ಡಾ|ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ .ಒಕ್ಕೂಟಗಳಿಂದ ವ್ಯಕ್ತಿತ್ವ ವಿಕಸನವಾಗಿದೆ ಎಂದರು.ನ್ಯಾಯವಾದಿ ವಿನಯ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೊಡಗು ವಲಯ ನಿರ್ದೇಶಕ ಸೀತಾರಾಮ ಶೆಟ್ಟಿ,ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಕಾರ್ಯನಿರ್ವಹಣಾಕಾರಿಮಂಜಪ್ಪ ಮೂಲ್ಯ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಉದ್ಯಮಿ ಹರೀಂದ್ರ ಪೈ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಧಿಕಾರಿ ಸುನಿತಾ ನಾಯಕ್,ಪಿಲಾತಬೆಟ್ಟು ,ನಯನಾಡು ,ಬಡಗಕಜೆಕಾರು,ಮಾಡಪಲ್ಕೆ,ಕರ್ಲ ಒಕ್ಕೂಟಗಳ ನಿರ್ಗಮನ ಅಧ್ಯಕ್ಷರಾದ ಗಂಗಾಧರ ಕೆ.,ಪದ್ಮಾವತಿ,ಗಿರಿಯಪ್ಪ,ಮಾಧವ,ಸೋಮಶೇಖರ ಹಾಗೂ ನೂತನ ಅಧ್ಯಕ್ಷರಾದ ಮೋಹನ ಸಾಲ್ಯಾನ್,ನಾಗಲಕ್ಷ್ಮಿ,ಉಮೇಶ್ ಪೂಜಾರಿ,ಲಕ್ಷ್ಮಣ ಮೂಲ್ಯ,ದಿನೇಶ್ ವೇದಿಕೆಯಲ್ಲಿದ್ದರು.
ನೂತನ ಪದಾಧಿಕಾರಿಗಳಿಗೆ ದಾಖಲಾತಿ ಪುಸ್ತಕ ಹಸ್ತಾಂತರಿಸುವ ಮೂಲಕ ಪದಗ್ರಹಣ ನಡೆಯಿತು.ನಿರ್ಗಮನ ಅಧ್ಯಕ್ಷರು ಅನಿಸಿಕೆ ವ್ಯಕ್ತಪಡಿಸಿದರು.ಉತ್ತಮ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ವೇಳೆ ಡಾ|ಎಲ್.ಎಚ್.ಮಂಜುನಾಥ್ ಅವರನ್ನು ಒಕ್ಕೂಟಗಳ ವತಿಯಿಂದ ಸಮ್ಮಾನಿಸಲಾಯಿತು.
ವಗ್ಗ ಮೇಲ್ವಿಚಾರಕಿ ಭವಾನಿ ಅವರು ಸ್ವಾಗತಿಸಿದರು.ಪಿಲಾತಬೆಟ್ಟು ಸೇವಾ ಪ್ರತಿನಿಧಿ ಅಮೃತಾ ಎಸ್.ವರದಿ ವಾಚಿಸಿದರು.ಸೇವಾ ಪ್ರತಿನಿಧಿ ಸೇವಾ ಪ್ರತಿನಿಧಿಯರಾದ ಸುಧಾ ಎಚ್.ರೈ ಬಹುಮಾನಿತರ ಪಟ್ಟಿ ವಾಚಿಸಿದರು. ಕೋಕಿಲಾ ವಂದಿಸಿದರು.ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
