ಮೂಡುಬಿದಿರೆ; ಬಸ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನ ಬ್ಯಾಗನ್ನು ಎಗರಿಸಿದ ಆರೋಪಿ ವಲಸೆ ಕಾರ್ಮಿಕನನ್ನು ಸ್ಥಳೀಯರು ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಮೂಡುಬಿದರೆ ಠಾಣಾ ವ್ಯಾಪ್ತಿಯ ಕಡಂದಲೆ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

20151204074053 (1)

20151204074053 (2)

20151204074053

ಮೂಡುಬಿದಿರೆಯಿಂದ ಕಡಂದಲೆಗೆ ಪ್ರಯಾಣಿಸುತ್ತಿದ್ದ ಯುವಕನೋರ್ವ ತನ್ನ ಬ್ಯಾಗನ್ನು ಬಸ್ಸಿನ ಹಿಂಬದಿಯಲ್ಲಿ ಇರಿಸಿದ್ದ ಎನ್ನಲಾಗಿದ್ದು, ಈ ಬ್ಯಾಗನ್ನು ಸಹ ಪ್ರಯಾಣಿಕನೋರ್ವ ಕದ್ದು, ಬಸ್ಸಿನಿಂದ ಇಳಿದಿದ್ದ. ಇದನ್ನು ಗಮನಿಸಿದ ಇತರ ಸಹ ಪ್ರಯಾಣಿಕರು ಯುವಕನಿಗೆ ಮಾಹಿತಿ ನೀಡಿದ್ದು, ಊರವರ ಸಹಾಯದಿಂದ ಆರೋಪಿಯನ್ನು ಬೆನ್ನಟ್ಟಿದಾಗ ಬ್ಯಾಗ್ ಸಹಿತ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಕೂಡಲೇ ಸ್ಥಳೀಯರು ಮೂಡುಬಿದಿರೆ ಪೋಲಿಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೋಲಿಸ್ ನಿರೀಕ್ಷಕ ಅನಂತ ಪದ್ಮನಾಭ ಸಹಿತ ಪೋಲಿಸರು ಬೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಸನ ಮೂಲದ ಆನಂದ(30) ಪೊಲೀಸರು ವಶಕ್ಕೆ ತೆಗೆದುಕೊಂಡ ವ್ಯಕ್ತಿ.

By suddi9

Leave a Reply

Your email address will not be published. Required fields are marked *