ಮೂಡುಬಿದಿರೆ: ಆದರ್ಶ ಸಂಸ್ಥೆಯ ಆಶ್ರಯದಲ್ಲಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳು ಹಾಗೂ ಪೋಷಕರ ಸಮಾವೇಶ ಶನಿವಾರ ಸಮಾಜಮಂದಿರದಲ್ಲಿ ನಡೆಯಿತು.

ದ.ಕ ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಅನ್ನಪೂರ್ಣ ಕೆ. ಕಾರ್ಯಕ್ರಮ ಉದ್ಘಾಟಿಸಿ, ಅಂಗವಿಕಲ, ವಿಕಲಚೇತನ ಎಂಬ ಪದ ಬಳಕೆಗಿಂತ ವಿಶೇಷ ಸಾಮಥ್ರ್ಯವುಳ್ಳವರು ಎಂದು ಬಳಸಿದರೆ ಉತ್ತಮ. ಈ ಪದವನ್ನು ಬಳಕೆ ಮಾಡುವ ಕುರಿತು ಇಲಾಖೆಯ ಮೂಲಕ ಸರ್ಕಾ ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಸ್ಥಳಿಯಾಡಳಿತವು ವಿಶೇಷ ಮಕ್ಕಳಿಗಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವಿಭಜಿತ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಮುರಳೀಧರ ನಾಕ್ , ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ಮೂಡುಬಿದರೆ ವಲಯದ ಅಧ್ಯಕ್ಷ ಅಬ್ದುಲ್ ಖಾದರ್, ಬನ್ನಡ್ಕ ಸೋನ್ಸ್ ಫಾರ್ಮ್ ಡಾ.ಎಲ್.ಸಿ ಸೋನ್ಸ್, ಹಸ್ದುಲ್ಲಾ ಇಸ್ಮಾಯಿಲ್ ಉಪಸ್ಥಿತರಿದ್ದರು.
ಸುಮತಿ ಸ್ವಾಗತಿಸಿದರು. ಆದರ್ಶ ಸಂಸ್ಥೆಯ ನಿರ್ದೇಶಕ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಮಾತನಾಡಿದರು. ಕಾಂತಿ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ವರದಿ ವಾಚಿಸಿದರು. ಅನಿತಾ ವಂದಿಸಿದರು.
