ಮೂಡುಬಿದಿರೆ: ಪ್ರೌಢಶಾಲಾ ಹಂತ ಮತ್ತು ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಅವಿಭಜಿತ ದ.ಕ ಜಿಲ್ಲೆ ಮಟ್ಟದ ಆಯುಷ್ ಆರೋಗ್ಯ ರಸಪ್ರಶ್ನೆ ಸ್ಪರ್ಧೆ  ಆಯುಷ್ ಹಬ್ಬವನ್ನು ಜಿಲ್ಲಾಮಟ್ಟದಲ್ಲಿ ಡಿ.12ರಂದು ಹಮ್ಮಿಕೊಳ್ಳಲಾಗಿದೆ.
ಪ್ರಥಮ ಸುತ್ತಿನ ತಾಲೂಕು ಮಟ್ಟದ ಸ್ಪರ್ಧೆ ಯು ಡಿ.12ರಂದು ತಾಲೂಕಿನ ಆಯ್ದ ಕೇಂದ್ರಗಳಲ್ಲಿ ಜರುಗಲಿದೆ. ತಾಲೂಕುಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಡಿ.19ರಂದು ಪಿಲಿಕುಳದಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಅರ್ಹತೆಯನ್ನು ಪಡೆಯುವರು.
ಜಿಲ್ಲಾಮಟ್ಟದಲ್ಲಿ ಈ ಎರಡೂ ವಿಭಾಗಗಳಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಿಗೆ ರೂ. 12,500, ರೂ 7,500 ಹಾಗೂ ರೂ 5,000 ವನ್ನು ನಗದು ಮತ್ತು ಪ್ರಶಸ್ತಿಯನ್ನು ಕೊಡಲಾಗುವುದು.
ರಸಪ್ರಶ್ನೆಯ ನಿಯಮಾವಳಿಗಳು ಮತ್ತು ಅಗತ್ಯ ಮಾಹಿಗಾಗಿ ಪ್ರೊ.ಡಾ.ಬಿ.ವಿನಯಚಂದ್ರ ಶೆಟ್ಟಿ, ಪ್ರಾಚಾರ್ಯರು, ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ, ವಿದ್ಯಾಗಿರಿ, ಮೂಡುಬಿದಿರೆ (principal.aamc@gmail.co  ಅಥವಾ ದೂರವಾಣಿ 09611497446) ಸಂಪರ್ಕಿ ಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

By suddi9

Leave a Reply

Your email address will not be published. Required fields are marked *