ಬಂಟ್ವಾಳ: ಸಂಘಟನೆ ಬಲಪಡಿಸುವಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕು ಅದರ ಮುಖೇನ ನಮ್ಮ ಬೇಡಿಕೆಗಳನ್ನು ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಪ್ತ ಸಮಾಲೋಚಕರಾದ ಆಶಾ ಪ್ರಸಾದ್ ರೈ ನುಡಿದರು.
ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿ ಗಳ ಸಂಘಟನೆಯ ಬಂಟ್ವಾಳ ಶಾಖೆಯ ವಾರ್ಷಿಕ ಮಹಾಸಬೆಯು ಬಿ.ಸಿ.ರೋಡ್-ಕೈಕಂಬದ ಸೂರ್ಯ ಟವರ್ ಸಭಾಂಗಣದಲ್ಲಿ ಉಮೇಶ್ ಪಿ.ರವರ ಅಧ್ಯಕ್ಷತೆಯಲ್ಲಿ ಜರಗಿತು.
KAR_2907

KAR_2898
ಜೀವಾ ವಿಮಾ ನಿಗಮದ ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಬಾಲಕೃಷ್ಣ ಡಿ. ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘಟನಾ ವಿಭಾಗದ ಅಧ್ಯಕ್ಷ ಜನಾರ್ಧನ ಪೆರಾಜೆ , ರಾಜ್ಯಾಧ್ಯಕ್ಷ ರಮೇಶ್ ಕುಮಾರ್ , ಬೆಳ್ತಂಗಡಿ ಶಾಖಾಧಿಕಾರಿ ಪದ್ಮನಾಭ ಎಚ್.ಆರ್ , ಜೀವ ವಿಮಾ ನಿಗಮದ ಪ್ರತಿನಿಧಿ ಗಳ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಪೀಟರ್ ಜೆ ಸಲ್ದಾನ , ಎಂ.ಎಸ್.ಭಟ್, ಮಹಿಳಾ ಸಂಘಟನಾ ಕಾರ್ಯದರ್ಶಿ ಭವಾನಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಲೋಕೇಶ್ ಶೆಟ್ಟಿ , ಕಾರ್ಯದರ್ಶಿ ನಾರಾಯಣ ಅಮೀನ್ ಮತ್ತು ಕುಶಾಲಪ್ಪ , ಮಹಿಳಾ ಸಂಘಟಕರಾಗಿ ಶಕೀಲಾ ಅಡ್ಯಂತಾಯ ಆಯ್ಕೆಯಾದರು. ಕಾರ್ಯದರ್ಶಿ ಪ್ರಕಾಶ್ಚಂದ್ರ ಆಳ್ವ ಲೆಕ್ಕಪತ್ರ ವರದಿ ಮಂಡಿಸಿದರು. ರೋಹಿದಾಸ್ ಕುಂದರ್ ವಂದಿಸಿ , ಚೇರ್ ಮೆನ್ಸ್ ಕ್ಲಬ್ ಮೆಂಬರ್ ಪಿ ವಸಂತ ಪ್ರಭು ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *