ಮೂಡುಬಿದರೆ: ಏಕೀಕರಣ ಪೂರ್ವ ಕಾಲವು ವಿಶ್ವ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಜೊತೆ ಮಿಳಿತಗೊಳಿಸಿ, ಸಕಾಲರ ಲೇಸು ಎನ್ನುವ ಉದ್ದೇಶದಿಂದಲೇ ಹೆಚ್ಚು ಪ್ರಚಲಿತವಾಯಿತು. ಕನ್ನಡ ಭಾಷೆಗೆ ಭಾವಸಂಪತ್ತು ಯಾವುದೇ ಮೂಲದಿಂದ ಬರಲಿ, ಅದು ಓದುಗನ್ನು ಸಹೃದಯನನ್ನಾಗಿ, ರಸಿಕನನ್ನಾಗಿ ರೂಪಿಸುವಂತಿರಲಿ ಎನ್ನುವ ಅಂಶವು ಮುಖ್ಯವಾಗಿತ್ತು. ಭೂಮಿ ತಾಯಿಯನ್ನು ಮಾತನಾಡಿಸುವ ಪ್ರಯತ್ನದೊಂದಿಗೆ, ಸಾಹಿತ್ಯದಲ್ಲಿ ಹೆಣ್ಣಿಗೆ ಪ್ರಾಧನ್ಯತೆ ಸಿಕ್ಕಿದ್ದು ಈ ಕಾಲಘಟದಲ್ಲೇ. ಜಡ್ಡು ಕಟ್ಟಿರುವ ಭಾಷೆಗೆ ಹೊಸ ಜೀವ ಸಂಚಾರ ತಂದು ಕೊಟ್ಟ ಏಕೀಕರಣ ಪೂರ್ವ ಕಾಲ, ಸಾಮಾನ್ಯರ ಸಾಹಿತ್ಯದ ಪರ್ವ ಕಾಲವಾಯಿತು ಎಂದು ಲೇಖಕ ಎಂದು ಡಾ.ಜಿ.ಬಿ ಹರೀಶ್ ಹೇಳಿದರು.
mbd_nov27_2ಆಳ್ವಾಸ್ ನುಡಿಸಿರಿ-2015ರ ಎರಡನೇ ದಿನ `ಅಧುನಿಕ ಕನ್ನಡ ಸಾಹಿತ್ಯ, ಹೊಸತನದ ಹುಡುಕಾಟ’ ವಿಚಾರಗೋಷ್ಠಿಯಲ್ಲಿ `ಏಕೀಕರಣ ಪೂರ್ವ ಸಾಹಿತ್ಯ ಕುರಿತು ಮಾತನಾಡಿದರು. ಹೊಸ ನುಡಿಗಟ್ಟುಗಳನ್ನು, ಹೊಸ ಸಂಪತ್ತನ್ನು ಕನ್ನಡಕ್ಕೆ ಸಾಹಿತಿಗಳು ನೀಡಿದರು.
ಆ ಕಾಲಘಟದಲ್ಲಿ ಸಾಹಿತಿಗಳು ಸಾಹಿತ್ಯದೊಂದಿಗೆ ಹೊಸ ಮನುಷ್ಯನ ಹುಡುಕಾಟದಲ್ಲಿದರು. ಸಾಹಿತ್ಯದ ಕಡೆಗೆ ಕನ್ನಡಿಗರ ಮನಸ್ಸನ್ನು ಸೆಳೆಯದರೆ ವಿಶ್ವ ಕರ್ನಾಟಕವಾಗುತ್ತದೆ, ಪ್ರಬುದ್ಧ ಕರ್ನಾಟಕವಾಗುತ್ತದೆ ಎನ್ನುವ ವಿಚಾರಗಳನ್ನು ಅರಿತಿದ್ದರು. ನೂರು ಸಾಹಿತಿಗಳು ಸೇರಿ ಒಂದೇ ಮನಸ್ಸಿನಲ್ಲಿ ಕನ್ನಡದ ಕೆಲಸ ಮಾಡಬೇಕು ಎನ್ನುವ ವಿಚಾರವನ್ನು ಅರಿತಿದ್ದರು.
ನೂರು ಸಾಹಿತಿಗಳು ಒಂದು ಮನಸ್ಸಿನಲ್ಲಿ ಕನ್ನಡದ ಕೆಲಸ ಮಾಡಬೇಕು. ಪರಿಶುದ್ಧ ಭಾವನೆ ಕನ್ನಡಿಗರ ಮನಸ್ಸಿನಲ್ಲಿ ಬರುವಂತಾಗಬೇಕು ನಮ್ಮ ಮನಸ್ಸು ಸಮಾಜಮುಖಿಯಾಗಿರಬೇಕೆಂಬ ಇರಾದೆ ಸಾಹಿತಿಗಳಾಗಿತ್ತು. ಈ ಕಾರಣದಿಂದಲೇ ಜನಸಾಮಾನ್ಯರಿಗೆ ಹತ್ತಿರವಾದ ಸಾಹಿತ್ಯ, ಜನಸಾಮಾನ್ಯರ ಸಾಹಿತ್ಯವಾಯಿತು ಎಂದರು.
ಡಾ.ಜಿ.ಬಿ ಹರೀಶ್ ಅವರನ್ನು ಡಾ.ನಾ ದಾಮೋದರ ಶೆಟ್ಟಿ ಗೌರವಿಸಿದರು. ಟಿ.ಎ.ಎನ್ ಖಂಡಿಗೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *