ಮೂಡುಬಿದರೆ: ಅನುಕರಣೆಯಿಂದ ಹೊಸತನ ಸೃಷ್ಠಿಸಲಾಗದು. ಅದರಿಂದ ಯಾವುದೇ ಜೀವಂತ ಚಳುವಳಿಯಾಗಲ್ಲ. ದ್ವೇಷದ ಸೃಷ್ಠಿಯಾಗದ ಚಳುವಳಿ ಅಲ್ಪಾಯುಷಿ. ಪ್ರಾಮಾಣಿಕ, ಕಳಕಳಿಯ ಬರಹಗಳ ಆರಂಭದಲ್ಲಿ ವಿರೋಧ ಎದುರಿಸಬಹುದು ಬಳಿಕ ಅದು ಹೊಸತನವಾಗುವುದು. ಹೊಸತನವೆನ್ನುವುದು ಒಳಗಿನ ತುಡಿತದಿಂದ ಬರಬೇಕೆ ಹೊರತು, ಹೊರಗಿನ ಒತ್ತಡಗಳಿಂದಲ್ಲ. ಭ್ರಷ್ಟತೆ, ಸ್ವಚ್ಛೆಗಿಂತ ನೈತಿಕತೆಯನ್ನು ಹುಡುಕಾಟ ಮುಖ್ಯವಾಗುತ್ತದೆ. ಎಂದು ಸಾಹಿತಿ ವಸುಧೇಂದ್ರ ಅಭಿಪ್ರಾಯಪಟ್ಟರು.
ಆಳ್ವಾಸ್ ನುಡಿಸಿರಿಯಲ್ಲಿ ಅಧುನಿಕ ಕನ್ನಡ ಸಾಹಿತ್ಯ ಹೊಸತನದ ಹುಡುಕಾಟ ವಿಚಾರಗೋಷ್ಠಿಯಲ್ಲಿ ಏಕೀಕರಣ ಉತ್ತರ ಸಾಹಿತ್ಯದ ಕುರಿತು ಮಾತನಾಡಿದರು.

0
ಸೃಜನಶೀಲತೆಯ ಹೊಸತನದ ಹುಡುಕಾಟಗಳಿಗಿರುವ ಸವಾಲುಗಳು ಎಲ್ಲರಿಗೂ ಒಂದೇ. ಬದ್ಧತೆಯೊಂದಿಗೆ ಸೃಜನಶೀಲತೆ ಬೆರೆತರೆ ಸಾಧನೆಯಾಗುತ್ತದೆ ಎಂದರು.
ಜನಸಮೂಹಕ್ಕೆ ಸಾಹಿತ್ಯವನ್ನು ತಪುಪಿಸಲು ಫೇಸುಬುಕ್, ಬ್ಲಾಗ್ಗಳಿಗೆ ಪರಿಣಾಮಕಾರಿ ಮಾಧ್ಯಮ. ಡಿಜಿಟಲೀಕರಣದಿಂದ ಸಾಹಿತ್ಯ ಕ್ಷೇತ್ರ ಮಹತ್ವದ ಬೆಳವಣಿಗೆಗಳಾಗಿವೆ. ಅಂತಾಜರ್ಾಲ, ಸಾಮಾಜಿಕ ಜಾಲತಾಣಗಳ ಮೂಲಕ ಸಾಹಿತ್ಯವನ್ನು ಸುರಕ್ಷಿತವಾಗಿ ಬಳಸುವ ಕ್ರಮ ನಮಗೆ ಗೊತ್ತಿರುವುದು ಮುಖ್ಯವಾಗುತ್ತದೆ ಎಂದರು.

ವಸುಧೇಂದ್ರ ಅವರು ಏಕೀಕರಣ ಉತ್ತರ ಸಾಹಿತ್ಯದ ಕುರಿತು ಮಾತನಾಡಿದರು.

By suddi9

Leave a Reply

Your email address will not be published. Required fields are marked *