ಮೂಡಬಿದರೆ: ಜನಪದಕ್ಕೆ ರಾಕ್ ಸಂಗೀತದ ಸ್ಪರ್ಶ ನೀಡಿರುವ ಗಾಯಕ ರಘುದೀಕ್ಷಿತ್ ನುಡಿಸಿರಿಯ 2ನೇ ದಿನ ತನ್ನ ಸಂಗೀತ ಕಾರ್ಯಕ್ರಮದ ಮೂಲಕ ಜನರ ಮನಸ್ಸನ್ನು ಸೂರೆಗೊಂಡರು.

ಪುತ್ತಿಗೆಪದವು ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿಯಮ್ಮ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಅಪೂರ್ವ ಸಂಗೀತ ಕಾರ್ಯಕ್ರಮ 30 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.
ಹಾಡು ಹಾಡುತ್ತಲೇ ಹಿಮ್ಮೇಳ ಸಂಗೀತಕ್ಕೆ ಹೆಜ್ಜೆ ಹಾಕಿದ ರಘು ದೀಕ್ಷಿತ್ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದರು. ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡದ ಜನಪದ ಸಂಗೀತ ಹಾಗೂ ಹಿಂದಿಯ ಹಾಡುಗಳನ್ನು ಸುಮಾರು 2 ಗಂಟೆಗಳ ಕಾಲ ಹಾಡಿದ್ದು, 2ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೊಸತನವನ್ನು ನೀಡಿತು.



