ಮೂಡುಬಿದಿರೆ: ಅಲ್ಲಿ ಕುಂತ್ರೆ ಕ್ಷಣಾರ್ಧದಲ್ಲೇ ನಿಮ್ಮ ಭಾವಚಿತ್ರ ಸಿದ್ಧ. ಪ್ರಸಿದ್ಧ, ಯುವ ಕಲಾವಿದರ ಚಿತ್ರ ಪ್ರದರ್ಶನ ಆ ಮೇಳದ ಸೂತ್ರ. ಇದು ಚಿತ್ರ ಸಂತೆಯ ಕಾಲಮೇಳ. ಆಳ್ವಾಸ್ ನುಡಿಸಿರಿಯಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದ ವಿಭಿನ್ನ ರೀತಿಯ ಕಲಾಪ್ರದರ್ಶನ, ಮಾರಾಟ ವ್ಯವಸ್ಥೆ ಜನರ ಗಮನಸೆಳೆಯುತ್ತಿದೆ.

1

4

5

2

3
20 ಜಿಲ್ಲೆಗಳ 64 ಕಲಾವಿದರ 72 ಮಳಿಗೆಗಳು, 1500ಕ್ಕೂ ಅಧಿಕ ಕಲಾಕೃತಿಗಳು ಕಲಾಮೇಳದಲ್ಲಿದೆ. ಒಂದಕ್ಕೊಂದು ಭಿನ್ನ ರೀತಿಯ ಕಲಾಕೃತಿಯ ಅಪೂರ್ವ ಒಂದೇ ಕಡೆ ನೋಡುವ ಅವಕಾಶ ಕಲಾ ರಸಿಕರದ್ದು. ನುಡಿಸಿರಿಯ ಮೊದಲ ದಿನದಿಂದಲೇ ಪ್ರಾರಂಭವಾದ ಈ ಕಾಲಮೇಳದಲ್ಲಿ, ತ್ರೀಡಿ ಚಿತ್ರ, ಚಿತ್ರದ ವಿಷಯಗಳು ಹೊಳೆಯುವಂತೆ ಕಾಣುವ ವಿಶಿಷ್ಟ ಚಿತ್ರಗಳು ಕಲಾವಿದರ ಸೃಜನಶೀಲತೆಯನ್ನು ಕಲಾರಸಿಕರು ಕೊಂಡಾಡುವಂತೆ ಮಾಡುತ್ತದೆ. ಕ್ಯಾನ್ವಸ್ನಲ್ಲಿ ಬಣ್ಣಗಳ ಉಪಯೋಗಿಸದೆ ಮರದ ಚೆಕ್ಕೆ, ಮರದ ತುಂಡುಗಳನ್ನೇ ಬಳಸಿ ಮಾಡಿರುವ ಚಿತ್ರ ಗಮನಸೆಳೆಯುತ್ತದೆ. ಕ್ಯಾನ್ವಸನ್ನು ಸ್ಪರ್ಶಿಸುವಾಗ ಒರಟು ರೀತಿಯಲ್ಲಿ ಬಣ್ಣಗಳನ್ನು ಜೋಡಿಸಿದ್ದು, ಅದರ ಮೇಲೆ ಬೆಳಕು ಹಾಯಿಸಿದಾಗ ಹೊಳೆಯುವ ಅಪರೂಪದ ಕಲಾಕೃತಿಯು ಪ್ರದರ್ಶನದಲ್ಲಿದೆ. ಉಡುಪಿ ಚಿತ್ರ ಕಲಾಮಂದಿರ ಕಲಾವಿದರ ಚಿತ್ರಗಳು ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳ ವೃತ್ತಿಪರ, ಹವ್ಯಾಸಿ ಕಲಾವಿದರಿಗೆ ಕಲಾಕೃತಿಗಳನ್ನು ಮಾರಾಟ ಮಾಡಲು ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.
ಕುಂತ್ರೆ ಚಿತ್ರ:
ಚಿತ್ರಸಂತೆಯಲ್ಲಿ ಹಾಗೇ ಕುಂತ್ರೆ ಕ್ಷಣಾರ್ಧದಲ್ಲಿ ಚಿತ್ರಬಿಡಿಸಿಕೊಡುವ ನಾಲ್ಕು ಕಲಾವಿದರು ಈ ಕಲಾಶಿಬಿರದಲ್ಲಿದ್ದಾರೆ. ಈ ನಾಲ್ಕು ಜನರಲ್ಲಿ ತಮ್ಮ ಚಿತ್ರ ಬಿಡಿಸಿಕೊಳ್ಳಲು ಜನರು ಕಾಯುವುದು ಸಾಮಾನ್ಯ ದೃಶ್ಯ. ನುಡಿಸಿರಿ ಕಲೆ ಮಹಾಪೋಷಕ. ಅಳ್ವಾಸ್ ಚಿತ್ರಸಿರಿಯ ಮೂಲಕ ನಾಡಿನ ಹೆಸರಾಂತ ಕಲಾವಿದರು ಚಿತ್ರ ನುಡಿಸಿರಿಗೆ ಚಿತ್ತಾರವಾದ, ರಾಜ್ಯದೆಲ್ಲೆಡೆಯ ಯುವ ಕಲಾವಿದರಿಗೆ ಕಲಾಮೇಳ ಉತ್ತಮ ಅವಕಾಶ ಎಂಬುದರಲ್ಲಿ ಸಂಶಯವಿಲ್ಲ ಎಂಬುವುದು ಕಲಾರಸಿಕ ಮಾತು.
.

By suddi9

Leave a Reply

Your email address will not be published. Required fields are marked *