ಮೂಡುಬಿದಿರೆ: ವಿಶಾಲ ವೇದಿಕೆ ಅದರಲ್ಲಿ ಬರೋಬರಿ 500ಕ್ಕೂ ಅಧಿಕ ಜನರು ಏಕಕಾಲದಲ್ಲಿ ಕಳಿಕೊಳ್ಳುವ ಅವಕಾಶ. ಅದರ ಮುಂಬಾಗದಲ್ಲಿ ಆಸೀನರಾದ ಸುಮಾರು 30 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಆಳ್ವಾಸ್ ನುಡಿಸಿರಿ 2015ಕ್ಕೆ ಚಾಲನೆ.
– ಇಂತಹದೊಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದದ್ದು ಪುತ್ತಿಗೆಪದವಿನ ವಿವೇಕಾನಂದ ನಗರ. ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ 12ನೇ ವರ್ಷದ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯನ್ನು ಹಿರಿಯ ಸಾಹಿತಿ ಡಾ. ವೀಣಾ ಉದ್ಘಾಟಿಸಿದರು.DSC_4741

DSC_4754

DSC_4636

DSC_4643

DSC_4744DSC_0203-3000x1995

DSC_4816

DSC_0015-3000x1955

DSC_0022-3000x2149

DSC_0185-3000x1995

DSC_0200-3000x1787
ನುಡಿಸಿರಿಯ ವಿಶೇಷ ಸಂಚಿಕೆ `ವಾಂಙ್ಮಯ’, ಅಂಧ ವಿದ್ಯಾರ್ಥಿ  ನಿರಂಜನ ಕಡ್ಲಾರು ಅವರ ಕತ್ತಲ ಬೆಳಕು ಪುಸ್ತಕ
ಸಂಚಿಕೆ, ಆಳ್ವಾಸ್ ಟುಡೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಅಧ್ಯಕ್ಷ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಏರ್ಯ ಲಕ್ಷ್ಮಿನಾರಾಯಣ ಆಳ್ವ, ವಿದ್ವಾಂಸ. ಬಿ.ಎ. ವಿವೇಕ ರೈ, ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಮಿಜಾರುಗುತ್ತು ಆನಂದ ಆಳ್ವ, ಎಸ್ಡಿಎಂ ಶಿಕ್ಷಣ ಸಂಸ್ಥೆ ಮಾಜಿ ಕಾರ್ಯದರ್ಶಿ  ಪ್ರಭಾಕರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮೂಡುಬಿದರೆ ಪುರಸಭೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಉದ್ಯಮಿ ಕೆ. ಶ್ರೀಪತಿ ಭಟ್ ಅತಿಥಿಗಳಾಗಿದ್ದರು

By suddi9

Leave a Reply

Your email address will not be published. Required fields are marked *