ಉಳ್ಳಾಲ: ಉಳ್ಳಾಲದಲ್ಲಿ ದುಷ್ಕರ್ಮಿಗಳ ಹಾವಳಿ ಮುಂದುವರೆದಿದ್ದು ತೊಕ್ಕೊಟ್ಟು ಟಿ.ಸಿ.ರೋಡ್ ಬಳಿಯ ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಬೈಕ್ ನಲ್ಲಿ ಬಂದ ಆಗಂತುಕರಿಬ್ಬರು ಕಲ್ಲೆಸೆದು ಕಿಟಕಿಯ ಗಾಜನ್ನು ಹಾನಿಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಜನನಿಬಿಡ ಪ್ರದೇಶವಾಗಿರುವ ಟಿ.ಸಿ.ರೋಡ್ ನಲ್ಲಿ ತುಳಸಿ ಹಬ್ಬದಲ್ಲಿರುವಾಗ ರಸ್ತೆ ಬದಿಯಲ್ಲಿರುವ ಸೇವಾ ಸಮಿತಿ ಕಟ್ಟಡದ ಗಾಜಿಗೆ ಬೈಕ್ ನಲ್ಲಿ ಬಂದ ಆಗಂತುಕರು ಕಲ್ಲೆಸೆದು ಪರಾರಿಯಾಗಿದ್ದಾರೆ.


ಕೊರಗಜ್ಜನಿಗೆ ಹರಕೆ : ತೊಕ್ಕೊಟ್ಟು ಒಳಪೇಟೆಯಿಂದ ಉಳ್ಳಾಲ ದಗರ್ಾ ಸಂಪಕರ್ಿಸುವ ಟಿ.ಸಿ.ರೋಡ್ನಲ್ಲಿ ಘಟನೆ ನಡೆಯುತ್ತದ್ದಂತೆ ಎರಡು ಕೋಮಿನ ಮುಖಂಡರು ಸ್ಥಳಕ್ಕೆ ಆಗಮಿಸಿದ್ದುಘಟನೆಯನ್ನು ಸೌಹಾರ್ಧಯುತ ಕಾಪಾಡುವಂತೆ ಮನವಿ ಮಾಡಿದರು. ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಭಗವಾನ್ದಾಸ್, ಭರತ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಯು.ಎಚ್.ಆಗಮಿಸಿ ಮಾತುಕತೆ ನಡೆಸಿದರು.ಕಲ್ಲೆಸೆತ ನಡೆಸಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಕೊರಗಜ್ಜನಿಗೆ ಹರಕೆ ಇಡಲಾಯಿತು. ಘಟನಾ ಸ್ಥಳಕ್ಕೆ ಎಸಿಪಿ ಕಲ್ಯಾಣ್ ಶೆಟ್ಟಿ, ಉಳ್ಳಾಲ ಇನ್ಸ್ಪೆಕ್ಟರ್ ಸವಿತ್ರ ತೇಜ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು


