ಉಳ್ಳಾಲ,ನ.16: ಗೋಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸಹಕಾರಿ ಸಂಘಗಳು ಪಶುಸಂಗೋಪನೆಯ ಸೇವಾ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಕ್ಯಾಂಪ್ಕೊ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಭಿಪ್ರಾಯಪಟ್ಟರು.
ಅವರು ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ಪಜೀರು ಬೀಜಗುರಿಯ ಗೋಶಾಲಾ ವಠಾರದಲ್ಲಿ ನಡೆದ ಸಾಮೂಹಿಕ ಗೋಪೂಜೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಎಮ್. ಕವಿತಾ ಎಸ್. ಶಾಸ್ತ್ರಿ ಮಾತನಾಡಿ ನಮ್ಮ ಸಂಸ್ಕೃತಿಯ ದ್ಯೂತಕವಾಗಿರುವ ಗೋಸೇವೆಯಲ್ಲಿ ಎಲ್ಲರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಪಜೀರಿನಲ್ಲಿ ನಡೆಸುತ್ತಿರುವ ಗೋಶಾಲೆ ಸಮಾಜಕ್ಕೆ ಒಂದು ಮಾದರಿಯಾಗಿದ್ದು ಇದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಗೋಶಾಲೆಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅನುದಾನದಿಂದ ಬೇಕಾದ ಕಾಮಗಾರಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಸಂಸದರ ನಿಧಿಯಿಂದ ಅಭಿವೃದ್ಧಿ ಕಾರ್ಯಕ್ಕೆ ಬೇಕಾದ ಅನುದಾನವನ್ನು ಬಿಡುಗಡೆಮಾಡಲು ಮಾತುಕತೆ ನಡೆಸಿದ್ಧೆನೆ ಎಂದರು.
ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ತಮಿಳುನಾಡು ನಾಗಪಟ್ನ ಸುಗಮ ವೇದಾಶ್ರಮದ ಡಾ| ಸ್ವಾಮೀ ವೇದಾತ್ಮದೇಶ್ ಭಾಗವಹಿಸಿದ್ದರು.
ಪಜೀರಿನ ಬೀಜಗುರಿ ಇಲ್ಲಿನ ಗೋವನಿತಾಶ್ರಯ ಟ್ರಸ್ಟ್ 2001ರಿಂದ ನಿರಂತರವಾಗಿ ನಡೆಸುವ ಗೋ ಸಂರಕ್ಷಣೆ ಹಾಗೂ ಮಹಿಳೆಯರ ಆಶ್ರಯ ತಾಣದ ಬಗ್ಗೆ ಕಾರ್ಯದರ್ಶಿ ಪಿ. ಅನಂತಕೃಷ್ಣ ಭಟ್ ಮಾತನಾಡಿ ಪ್ರತಿ ತಿಂಗಳು ಸುಮಾರು 4 ಲಕ್ಷ ರೂ ವೆಚ್ಚ ಈ ಗೋಸೇವಾ ಕಾರ್ಯಕ್ಕೆ ಅವಶ್ಯಕವಿದ್ದು ದಾನಿಗಳು ಸಹಕರಿಸಬೇಕಾಗಿ ಮನವಿ ಮಾಡಿದರು.
ಗೋವನಿತಾಶ್ರಯ ಟ್ರಸ್ಟ್ನ ಡಾ| ಅನಂತಲಕ್ಷ್ಮಿ ಭಟ್, ಎನ್ ಶ್ರೀಧರ ಭಟ್, ಮೋಹನ ದಾಸ್ ಪಡಿಯಾರ್, ಜೆ. ಕಷ್ಣಮೂರ್ತಿ ಉಪಸ್ಥಿತರಿದ್ದರು.
ಕೆಎಂ ಎಫ್ ನಿವೃತ್ತ ಜಂಟಿ ನಿರ್ದೇಶಕ ಡಿ.ಎಸ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಮನೋಹರ ತುಳಜಾರಾಂ ವಂದಿಸಿದರು.

By suddi9

Leave a Reply

Your email address will not be published. Required fields are marked *