ಬಂಟ್ವಾಳ: ಬಂಟ್ವಾಳದಲ್ಲಿ ವಟಪುರ ಕ್ಷೇತ್ರ ಪ್ರತೀತಿ ಹೊಂದಿರುವ ಇಲ್ಲಿನ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಇದೇ 30ರಂದು ಲಕ್ಷದೀಪೋತ್ಸವ ಪ್ರಯುಕ್ತ ಆಕರ್ಷಕ ಗುರ್ಜಿ ಉತ್ಸವ ನಡೆಯಲಿದೆ.

ಇದಕ್ಕಾಗಿ ಇಲ್ಲಿನ ಬಾಳಿಗಾ ಕುಟುಂಬಿಕರು ದೇವಳದ ಎದುರು ರಸ್ತೆಯಲ್ಲಿ ಗುರ್ಜಿ ನಿರ್ಮಾಣಕ್ಕೆ ಶಾಶ್ವತ ಪೀಠ ಅಳವಡಿಸುವ ಕಾಮಗಾರಿ ಭರದಿಂದ ನಡೆಸುತ್ತಿದ್ದು, ಗುರ್ಜಿಯಲ್ಲಿ ಬೆಳ್ಳಿ ಪೀಠ ಅಳವಡಿಸಲು ಮುಂದಾಗಿದ್ದಾರೆ.
ಈ ರಸ್ತೆಯಲ್ಲಿ ಎರಡು ಪ್ರತ್ಯೇಕ ಗುರ್ಜಿ ರಥದಲ್ಲಿ ವೆಂಕಟರಮಣ ಸ್ವಾಮಿ ದೇವರು ಕುಳಿತು ಪೂಜೆ ಸ್ವೀಕರಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಅಂದು ಬೆಳಿಗ್ಗೆ ಎಸ್ವಿಎಸ್ ದೇವಳ ಪ್ರೌಢಶಾಲೆ ಬಳಿ ನೆಲ್ಲಿಕಟ್ಟೆ ಪೂಜೆ, ಧಾತ್ರಿ ಹವನ, ವನಭೋಜನ ಬಳಿಕ ದೇವರು ಬಡ್ಡಕಟ್ಟೆ ಮತ್ತು ಬಂಟ್ವಾಳ ಪೇಟೆ ಸವಾರಿ ಬಳಿಕ ಹೂವು ಮತ್ತು ಹಣ್ಣು ಹಂಪಲು ಹಾಗೂ ತರಕಾರಿಗಳಿಂದಲೇ ವಿಶೇಷವಾಗಿ ಅಲಂಕಾರಗೊಂಡ ಗುರ್ಜಿ ಉತ್ಸವ ನಡೆಯುತ್ತದೆ ಎಂದು ದೇವಳದ ಭಕ್ತರು ತಿಳಿಸಿದ್ದಾರೆ.
ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ
