ಬಜಪೆ: *ತಂತ್ರಜ್ಞಾನ ಹಾಗೂ ತಾಂತ್ರಿಕ ಅಭಿವೃದ್ಧಿಗಳ ನಿತ್ಯದ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಲೇಬೇಕು. ವ್ಯವಹಾರಿಕವಾಗಿ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಎಚ್ಚರಿಸಬೇಕು.* ಎಂಬ ಪ್ರಸನ್ನ ಟೆಕ್ನಾಲಿಜಿಸ್ನ ಸಾಫ್ಟ್ವೆರ್ ಎಂಜಿನಿಯರ್ ಚಿಂದಬರ್ ಹೇಳಿದರು. 
ಅವರು ಕೆಂಜಾರು ಶ್ರೀ ದೇವಿ ಕಾಲೇಜಿನಲ್ಲಿ ಎಂಸಿಎ ವಿಭಾಗದ ಆಶ್ರಯದಲ್ಲಿ ಜರಗಿದ *ಎಂವಿಸಿ ಆರ್ಕೆಟೆಕ್ಟರ್* ವಿಶೇಷ ತಂತ್ರಜ್ಞಾನ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರಿನ್ಸಿಪಾಲ್ ಡಾ|ದಿಲೀಪ್ ಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ಧರು. ಕಾಲೇಜಿನ ಎಂಸಿಎ ವಿಭಾಗದ ಮುಖ್ಯಸ್ಥರಾದ ಪ್ರೋ. ನೇತ್ರಾವತಿ ಪಿ.ಎಸ್ ಪ್ರಾಸ್ತಾವಿಕ ಮಾತನಾಡಿದರು.
