ಬಂಟ್ವಾಳ: ಅಂತರ್ರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317-ಡಿ ಪ್ರಾಂತ್ಯ 7ರ ಬಂಟ್ವಾಳ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಇದರ ವತಿಯಿಂದ ಮೆಲ್ಕಾರ್ ಬಿರ್ವ ಅಡಿಟೋರಿಯಂನಲ್ಲಿ ಇದೇ 22ರಂದು ‘ಲಯನ್ಸ್ ಪ್ರಾಂತೀಯ ಸಮ್ಮೇಳನ’ ಜೊತೆಗೆ ಸ್ವಯಂ ಪ್ರೇರಿತ 100 ಮಂದಿ ಬೃಹತ್ ರಕ್ತದಾನ ಶಿಬಿರ, ‘ಅಮ್ಮ’ ವಾರ್ಷಿಕ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ.ಹೇಳಿದ್ದಾರೆ.
ಮೆಲ್ಕಾರ್ನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಸಂಸ್ಥೆ ಮತ್ತು ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕಿನ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
19btl-Lions

ಅಂದು ಬೆಳಿಗ್ಗೆ ನಡೆಯುವ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ವಿವಿಧ ವಾರ್ಷಿಕ ಸೇವಾ ಕಾರ್ಯಕ್ರಮಗಳಿಗೆ ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡುವರು. ಅಡ್ಯಾರ್ ಭಂಡಾರಿ ಫೌಂಡೇಶನ್ ಟ್ರಸ್ಟಿ ಜಗನ್ನಾಥ ಚೌಟ, ಮೆಲ್ಕಾರ್ ಬಿರ್ವ ಸೆಂಟರ್ ಮಾಲೀಕ ಕೆ.ಸಂಜೀವ ಪೂಜಾರಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್, ಮಂಗಳೂರು ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಟೆಕ್ನಿಕಲ್ ಸೂಪರ್ವೈಸರ್ ಭವಾನಿ ಶಂಕರ್, ಲಯನ್ಸ್ ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಬಿ.ವಸಂತ ಬಾಳಿಗಾ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಂತ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು.

ಅಂದು ಸಂಜೆ ನಡೆಯುವ ‘ಅಮ್ಮ’ ಹರ್ಷದ ಜತೆ ವರ್ಷದ ಸಂಭ್ರಮ ಪ್ರಾಂತೀಯ ಸಮ್ಮೇಳವನ್ನು ಪ್ರಾಂತ್ಯದ ಪ್ರಥಮ ಮಹಿಳೆ ಲಯನ್ ದೇವಿಕಾ ದಾಮೋದರ್ ಉದ್ಘಾಟಿಸಲಿದ್ದು, ಲಯನ್ಸ್ ಮಲ್ಟಿಪಲ್ ಜಿಲ್ಲೆ 317ರ ಅಧ್ಯಕ್ಷ ಲಯನ್ ಸತ್ಯಪ್ರಕಾಶ್ ಉಪಾಧ್ಯ ಮತ್ತಿತರ ಗಣ್ಯರು ಭಾಗವಹಿಸುವರು.
ಪ್ರಧಾನ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.

ಈಗಾಗಲೇ ತಾಲ್ಲೂಕಿನಲ್ಲೇ ಪ್ರಥಮ ಎಂಬಂತೆ ಬಿ.ಸಿ.ರೋಡ್ನಲ್ಲಿ ಲಯನ್ಸ್ ಭವನ ಮತ್ತು ಮಕ್ಕಳ ಪಾರ್ಕ್ ರಚಿಸಲಾಗಿದ್ದು, ಶೀಘ್ರವೇ ಹಿರಿಯ ನಾಗರಿಕರಿಗೆ ವಾಕಿಂಗ್ ಪಾರ್ಕ್ ಹಾಗೂ ಲಯನ್ಸ್ ಸಮಾಜ ಮಂದಿರ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.
ಮಂಗಳೂರಿನ ಸೇವಾ ಭಾರತಿ ಟ್ರಸ್ಟ್, ಬಂಟ್ವಳ ಕ್ಷೇತ್ರ ಶಿಕ್ಷಣ ಇಲಾಖೆ ಸಹಕಾರದಲ್ಲಿ ವಿಕಲಚೇತನ ಮಕ್ಕಳಿಗೆ ಪ್ತಿದಿನ ಇಬ್ಬರು ವೈದ್ರ ಸಹಿತ ಆರೋಗ್ಯ ಮತ್ತು ಥೆರಪಿ ಸೇವೆ ನೀಡಲಾಗುತ್ತಿದ್ದು, ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಸಹಕಾರದಲ್ಲಿ ನಿರ್ಗತಿಕ ಮಹಿಳೆಯರಿಗೆ ನೆರವು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅರಣ್ಯ ಇಲಾಖೆ ಸಹಕಾರದಲ್ಲಿ ಇಲ್ಲಿನ ಒಟ್ಟು 16 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಔಷಧೀಯ ಗಿಡ ನೆಟ್ಟು ಪೋಷಿಸಲಾಗುತ್ತಿದೆ. ಲಯನ್ಸ್ನ ಸೇವಾ ಚಟುವಟಿಕೆ ಯಲ್ಲಿ ಯುವಜನತೆ ಪಾಲ್ಗೊಳ್ಳಲು ಅರ್ಹ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಐಎಫ್ಎಸ್ ಮತ್ತಿತರ ಸ್ಪರ್ಧಾ ಪರೀಕ್ಷೆ ಬಗ್ಗೆ ಉಚಿತ ತರಬೇತಿ, ಬಡತನ ನಿರ್ಮೂಲನೆ, ಸಸ್ಯ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಪ್ರಮುಖರಾದ ಎನ್. ಸತೀಶ್ ಕುಡ್ವ, ಸುಧಾಕರ ಆಚಾರ್ಯ, ಜಯಂತ ಶೆಟ್ಟಿ, ಮಧ್ವರಾಜ್ ಬಿ.ಕಲ್ಮಾಡಿ, ಪುಷ್ಪರಾಜ್ ಶೆಟ್ಟಿ, ಶಿವಾನಂದ ಬಾಳಿಗಾ, ಶ್ರೀನಿವಾಸ್ ಪೂಜಾರಿ, ರೂಪೇಶ್ ಆಚಾರ್ಯ, ಲಕ್ಷ್ಮಣ ಅಗ್ರಬೈಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

By Suddi9

Leave a Reply

Your email address will not be published. Required fields are marked *