ಬಂಟ್ವಾಳ: ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ರಾಜ್ಯ ನೌಕರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಕೆ.ನೀಲೋಜಿರಾವ್ ಬೇಕಲ್ ರವರು ಸ್ವಾಗತಿಸಿದರು. ಸಂಘದ ಅಜೀವ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ನಿವೃತ್ತ ಸರ್ವೆಯರ್ ದಿ.ರಾಮಣ್ಣ ಶೆಟ್ಟಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ದಿ.ವಿಟ್ಲ ರಾಮ ಮೊಯಿಲಿರವರಿಬ್ಬರಿಗೆ ಶ್ರದ್ಧಾಂಜಲಿ ಅರ್ಪಿ ಸಲಾಯಿತು.

ಕಳೆದ ಸಭೆಯ ನಡವಳಿಗಳ ಮತ್ತು ಸಂಘದ ಲೆಕ್ಕ ಪತ್ರದ ವಿವರಗಳನ್ನು ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದರು. ಕನ್ನಡ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯಂತೆ ಇನ್ನು ಮುಂದೆ ನಾಡಕಛೇರಿಗಳಲ್ಲೇ ರಾಜ್ಯ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರ ನೀಡಲಾಗುವುದು ಎಂಬ ಮಾನ್ಯ ಜಿಲ್ಲಾಧಿಕಾರಿಯವರ ಪ್ರಕಟಣೆ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಕಾರಣ ಈಗಾಗಲೇ ನಾಡಕಛೇರಿಗಳಿಂದ ಆರ್.ಟಿ.ಸಿ , ಆಧಾರ್ ಕಾರ್ಡ್ ಮತ್ತು ಇನ್ನಿತರ ನೀತಿಗಳನ್ನು ಪಡೆಯುವರೇ ನಿತ್ಯ ಸರದಿ ಸಾಲಿನಲ್ಲಿ ನಿಂತು ಶ್ರೀ ಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟ ಹೇಳತೀರದು . ಇನ್ನು ಈ ಪ್ರಕಟಣೆ ಪ್ರಕಾರ ಪಿಂಚಣಿದಾರರೂ ತಮ್ಮ ಜೀವಿತ ಪ್ರಮಾಣ ಪತ್ರ ಪಡೆಯಲು ನಾಢಕಛೇರಿಗಳಲ್ಲಿ ಅಹೋರಾತ್ರಿ ಅಲೆದು ಸಂಕಷ್ಟಕ್ಕೆ ಬೀಳುವ ಪರಿಸ್ಥಿತಿ ಹೇಳತೀರದು . ಈಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮೊದಲಿನಂತೆ ಯಥಾ ಸ್ಥಿತಿ ಯಲ್ಲೇ ಇರಿಸುವರೇ ಕೇಳಿಕೊಳ್ಳುವುದೆಂದು ನಿರ್ಣಯ ಕೈಗೊಳ್ಳಲಾಯಿತು.
ಅದೇ ರೀತಿ ಖಾಸಗಿ ಬಸ್ಸುಗಳಲ್ಲಿಯೂ ನಿವೃತ್ತರಿಗೆ ರಾಜ್ಯ ಸರಕಾರ ನೀಡುವ ರಿಯಾಯತಿ ದರಗಳನ್ನು ನೀಡುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಳ್ಳುವುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ದಿ.13-10-2010 ರ ಸರಕಾರಿ ಆದೇಶದಂತೆ ವಯಸ್ಸು 80ದಾಟಿದ ಪಿಂಚಣಿದಾರರಿಗೆ ನೀಡುತ್ತಿರುವ ಪಿಂಚಣಿ ದರ ಹೆಚ್ಚಳ ಸೌಲಭ್ಯವನ್ನು ದಿ.1-7-1993ರ ನಂತರ ನಿವೃತ್ತರಾದವರಿಗೂ ಕೂಡಾ ಯಥಾ ಪ್ರಕಾರ ಅನ್ವಯವಾಗುವಂತೆ ಆದೇಶಿಸಬೇಕೆಂದು ಸರಕಾರವನ್ನು ಒತ್ತಾಯಿಸುವುದೆಂದು ನಿರ್ಣಯಿಸಲಾಯಿತು.
ವಯಸ್ಸು 60 ದಾಟಿದ ಹಿರಿಯ ನಾಗರಿಕರಿಗೆ ರಾಜ್ಯ ಸರಕಾರವು ನೀಡುತ್ತಿರುವ ರಾಜ್ಯ ಸರಕಾರಿ ರಿಯಾಯತಿ(25%) ಯನ್ನು ಇತರ ಯಾವುದೇ ರಾಜ್ಯಗಳ ಬಸ್ಸುಗಳಲ್ಲಿಯೂ ಅನ್ವಯವಾಗುವಂತೆ ರಿಯಾಯತಿ ನೀಡುವಂತೆ ಸಂಬಂಧ ಪಟ್ಟವರಲ್ಲಿ ಬರಕೊಳ್ಳೂವುದೆಂದು ನಿರ್ಣಯಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಎ.ಲಿಂಗಪ್ಪ ಕೈಕುಂಜೆ, ಎನ್.ಕೃಷ್ಣರಾಜ ಶೆಟ್ಟಿ, ಸಂ.ಕಾರ್ಯದರ್ಶಿ ಗಳಾದ ಚಂದ್ರಶೇಖರ ಗಟ್ಟಿ, ಚಂದೂ ನಾಯಕ್, ಸದಸ್ಯರುಗಳಾದ ಆನಂದ ನಾಯಕ್, ಎಮ್.ದಿನಕರ್, ಲೋಕನಾಥ ಶೆಟ್ಟಿ, ಪಟವರ್ಧನ, ದೂಮಣ್ಣ ರೈ, ಶಂಕರ ಪೂಜಾರಿ, ಅಬ್ದುಲ್ ಸಲಾಮ್, ರಾಘವನ್ ನಾಯರ್, ರಾಧಾಕೃಷ್ಣ ನಾಯಕ್, ನಂದಕಿಶೋರ್, ಗುಣಪಾಲ್ ರಾವ್, ಕೋಟ್ಯಪ್ಪ ನಾಯಕ್, ತೆರೆಸಾ ಲಿಲ್ಲಿ ಮೊಂತೆರೋ, ಬಿ.ಕೊರಗಪ್ಪ, ರಾಧಾಕೃಷ್ಣ ಶರ್ಮ ಮತ್ತಿತರರು ಹಾಜರಿದ್ದರು. ಕೊನೆಯಲ್ಲಿ ಜತೆಕಾರ್ಯದರ್ಶಿ ಎ.ದಾಮೋದರ್ ವಂದಿಸಿದರು.

By suddi9

Leave a Reply

Your email address will not be published. Required fields are marked *