ಮೂಡುಬಿದಿರೆ: ಹೊಸನಾಡು ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ದ್ವಾರಕಾಮಯ ಕಟ್ಟಡದಲ್ಲಿ ಶಿರಿಡಿ ಸಾಯಿಬಾಬಾ ಅವರ ನೂತನ ಮೂರ್ತಿಯನ್ನು ಶುಕ್ರವಾರ ಪ್ರತಿಷ್ಠಾಪಿಸಲಾಯಿತು ಹಾಗೂ ಪುರಂದರದಾಸರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಕಟೀಲು ಕ್ಷೇತ್ರದ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಪ್ರತಿಷ್ಠಾವಿಧಿ ನೆರವೇರಿಸಿದರು.
ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್, ಕೊಡ್ಯಡ್ಕ ಕ್ಷೇತ್ರದ ನಾರಾಯಣ ತಂತ್ರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಕೊಡ್ಯಡ್ಕ ಕ್ಷೇತ್ರದ ಸ್ಥಾಪಕ ಆಡಳಿತದ ಮೊಕ್ತೇಸರ ಜಯರಾಮ ಹೆಗ್ಡೆ ಜಿ. ಪಂ ಮಾಜಿ ಅಧ್ಯಕ್ಷ ಕೆ. ಪಿ ಸುಚರಿತ ಶೆಟ್ಟಿ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ್ ಅಧಿಕಾರಿ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ರಘುರಾಮ ಹೆಗ್ಡೆ, ಕೊಡ್ಯಡ್ಕ ರವಿರಾಜ ಹೆಗ್ಡೆ, ಕೊಡ್ಯಡ್ಕ ನರಸಿಂಹ ಹೆಗ್ಡೆ ಮತ್ತಿತರು ಉಪಸ್ಥಿತರಿದ್ದರು.
