ಬಜಪೆ:*ಮಕ್ಕಳು ಎಳೆಯರಿರುವಾಗಲೇ ಅವರಲ್ಲಿನ ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸಿ ಅವರ ಭವಿಷ್ಯದ ವ್ಯಕ್ತಿತ್ವ ರೂಪಿಸುವಲ್ಲಿ ಮನೆ ಮಂದಿಯ ಜವಾಬ್ದಾರಿ ಅತ್ಯಂತ ಪ್ರಮುಖ ಮಕ್ಕಳು ಈಗಿನ ಆಧುನಿಕ ತಂತ್ರಜ್ಞಾನವನ್ನು ಬೇಗ ಒಗ್ಗಿಸಿಕೊಳ್ಳುತ್ತಾರೆ. ಆದರೆ ಅವರಲ್ಲಿ ಸಂಸ್ಕಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಅಭಿರುಚಿ ಮೂಡಿಸುವುದು ಹಿರಿಯರ ಕರ್ತವ್ಯ ಎಂದು ಕಲಾವಿದೆ, ಕಟೀಲು ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿನಿ ಅನುಜ್ಞಾ ಭಟ್ ಹೇಳಿದರು.

ಅವರು ಎಕ್ಕಾರು-ಕೆಂಚಗುಡ್ಡೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
*ಮಕ್ಕಳ ದಿನ*ದ ಅಂಗವಾಗಿ ನಾನಾ ಮನರಂಜನಾ ಸ್ಪಧರ್ೆಗಳು, ಛದ್ಮವೇಷ ಸ್ಪಧರ್ೆಗಳು ಜರಗಿದ್ದು ವಿಜೇತ ಪುಟಾಣಿಗಳಿಗೆ ಹಾಗೂ ಅಂಗನವಾಡಿಯ ಎಲ್ಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಪುರಸ್ಕಾರಿಸಲಾಯಿತು.
ಗ್ರಾಮ ಪಂಚಯತಿ ಸದಸಸ್ಯ ವಿಕ್ರಮ್ ಮಾಡಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು *ಎಕ್ಕಾರು ಕೆಂಚಗುಡ್ಡೆ ಅಂಗನವಡಿ ಹಲವು ವೈಶಿಷ್ಯಗಳೊಂದಿಗೆ ಗಮನಸೆಳಿದಿದ್ದು ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಪಡೆಯುವಂತಾಗಲು ಗ್ರಾ.ಪಂ ಕೂಡಾ ಸಹಕಾರ ನೀಡಲು ಸಿದ್ಧವಿದೆ* ಎಂದರು ಹಿರಿಯರಾದ ಬಾಬು ಅವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಅಂಗನವಾಡಿಯ ಪುಟಾಣಿ *ಸಾನ್ವಿ*ಯ ಬತರ್್ಡೇ ಆಚರಿಸಲಾಯಿತು.
ಅಂಗನವಾಡಿ ಬಾಲವಿಕಸ ಸಮಿತಿಯ ಸದಸ್ಯರು ಸ್ತ್ರೀಶಕ್ತಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂಗನವಾಡಿ ಮೇಲ್ವಿಚಾರಣೆ ನಿರ್ಮಲಾ ಭಾಸ್ಕರ ಭಟ್ ಅವರು ಪ್ರಸ್ತಾಮಿಕ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದರು ಸಹಾಯಕಿ ಲೋಲಾಕ್ಷಿ ಉಪಸ್ಥಿತರಿದ್ದರು.

