ಬಜಪೆ*ಪ್ರಕೃತಿ-ಜೀವರಾಶಿ ಹಾಗೂ ಮನುಜರ ನಡುವಿನ ಸಂಬಂಧ, ಹಬ್ಬ-ಆಚರಣೆಗಳ ಸಂಸ್ಕಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳು, ಸಾಮೂಹಿಕ ಪಾಲ್ಗೊಳ್ಳುವಿಕೆಯ ಮಹತ್ವದ ಬಗೆಗೆ ತಿಳುವಳಿಕೆ ಅಗತ್ಯ. ಸಮಗ್ರ ಸಂಸ್ಕೃತಿ ಹಾಗೂ ಸಂಸ್ಕಾರಗಳ ಸಂಕೇತವಾಗಿ ದೀಪಾವಳಿ ಆಚರಿಸಲ್ಪಡುತ್ತದೆ. ಭೂಮಿ, ಗೋಮಾತೆ, ಕೃಷಿ ಹಾಗೂ ಸಮಸ್ತ ಪ್ರಕೃತಿಯನ್ನು ಪೂಜ್ಯನೀಯವಾಗಿ ಹಾಕುವುದು ಈ ನಾಡಿನ ಸಂಸ್ಕಾರ. ಹಿರಿಯರ ಅನುಭವ ಹಾಗೂ ತಿಳುವಳಿಕೆಗಳನ್ನು ಕಿರಿಯರಿಗೆ ತಿಳಿಸಿದರೆ ಸಮೃದ್ಧ ಸಂಸ್ಕಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ನಶಿಸಿದಂತೆ ಕಾಪಾಡಬಹುದು* ಎಂದು ನಿವೃತ್ತ ಪಿಡಿಓ ಹಾಗೂ ರೋಟರಿ ಸದಸ್ಯ ಮಾಧವ ಎಂ. ಅಮೀನ್ ದೊಡ್ಡಿಕಟ್ಟ ಅವರು ಹೇಳಿದರು.


ಬಜಪೆ ರೋಟರಿ ಕ್ಲಬ್ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ರೋಟರಿ ಭವನದಲ್ಲಿ *ದೀಪಾವಳಿ ಸಂಭ್ರಮಾಚರಣೆ* ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದೀಪಾವಳಿ-ಬಲೀಂದ್ರ ಪೂಜೆ ಹಾಗೂ ಕೃಷಿ ಸಂಸ್ಕೃತಿಯ ಹಾಗೂ ಗೃಹೋಪಯೋಗಿ ಪರಿಕರಗಳನ್ನು ಪರಿಚಯಿಸಿದರು.
ಬಲೀಂದ್ರ ಪೂಜೆ:
ಹಳೆಯ ಕೃಷಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಅಲಂಕರಿಸಿದ್ದು, ಆಕರ್ಷಕ ರಂಗೋಲಿ ಹಣತೆಗಳ ಸಾಲುಗಳ ಮಧ್ಯೆ ಬಲೀಂದ್ರ ಕಂಬ. ಹಿರಿಯರಾದ ಸುಕುಮಾರ್ ಸಾಲ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶ್ರೇಯಾ ಸ್ತುತಿಗೀತೆ ಹಾಡಿದರು. ಮಾಧವ ಅಮೀನ್ ಬಲೀಂದ್ರನನ್ನು ಕರೆವ ಹಾಡನ್ನು ಹಾಡಿದರು.
ಬಳಿಕ ಮಕ್ಕಳು, ಮಹಿಳೆಯರು, ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರೋಟರಿ ಕುಟುಂಬದ ಸದಸ್ಯರ ಸಮ್ಮಿಲನದಲ್ಲಿ ಹಬ್ಬದೂಟ ಏಪರ್ಾಡಾಗಿತ್ತು.
ಬಜಪೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಲೇರಿಯನ್ ಅವರು *ಮಾನವ ಸಂಬಂಧಗಳ ನಡುವಿನ ಆತಂಕಗಳು ಹಾಗೂ ಪರಿಹಾರ ಸೂತ್ರಗಳು* ಎಂಬ ವಿಷಯವಾಗಿ ವಿಚಾರ ಮಂಡಿಸಿದರು.
ರೋಟರಿಯ ನಿಕಟ ಪೂರ್ವ ಅಧ್ಯಕ್ಷ ರೋಬಟರ್್ ಫ್ರಾಂಕ್ಲಿನ್ ರೇಗೊ, ಕಾರ್ಯದಶರ್ಿ ಲೆನ್ನಿ ಫೆನರ್ಾಂಡಿಸ್, ಬಜಪೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರೋಸಿ ಮಥಾಯಸ್, ಗ್ರಾ.ಪಂ. ಸದಸ್ಯರಾದ ಸುಮಾ ಬಿ. ಶೆಟ್ಟಿ, ಜೋಕಿಮ್ ಸಿಕ್ವೇರಾ, ಬಜಪೆ ವ್ಯವಸಾಯ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ಪೆಮರ್ುದೆ ಶ್ರೀಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶೇಖರ ಶೆಟ್ಟಿ ಕಲ್ಪವೃಕ್ಷ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ 18ವಿಎಂ. ಬಜಪೆ ರೋಟರಿ


