ಗ್ರೀನ್ ಬಜ್ಪೆ ಸರ್ವಿಸಸ್ ಮಾದರಿಯಲ್ಲಿ ಜಿಲ್ಲೆಯಾದ್ಯಂತ ತ್ಯಾಜ್ಯ ವಿಲೇವಾರಿ ಘಟಕ ಅನುಷ್ಠಾನಕ್ಕೆ ಸೂಕ್ತ ಕ್ರಮ – ದ.ಕ.ಜಿ.ಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ
ಬಜಪೆ :ಹಲವು ಸವಾಲುಗಳ ಮಧ್ಯೆಯೂ ತ್ಯಾಜ್ಯದಿಂದ ಕಿರಿಕಿರಿ ಅನುಭವಿಸುತ್ತಿದ್ದ ಬಜಪೆ ಗ್ರಾ.ಪಂ ವ್ಯಾಪ್ತಿಯನ್ನು ತ್ಯಾಜ್ಯ ಮುಕ್ತಗೊಳಿಸಿ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಖಾಸಗಿ ಸಂಸ್ಥೆ ಗ್ರೀನ್ ಬಜ್ಪೆ ಸರ್ವಿಸಸ್ನ ಕಾರ್ಯ ಚಟುವಟಿಕೆಗಳು ನಿಜಕ್ಕೂ ತ್ಯಾಜ್ಯ ವಿಲೇವಾರಿ ಘಟಕ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಅದ್ಯತೆಯ ವಿಶಯವಾಗಿ ಸಮಲೋಚನೆಲಾಗುವುದು. ಗ್ರೀನ್ ಬಜ್ಪೆ ಸರ್ವಿಸಸ್ನ ಘಟಕ ಅತ್ಯಂತ ವೈಜ್ಞಾನಿಕವಾಗಿಯೂ ಪರಿಸರ ಸ್ನೇಹಿಯಾಗಿಯೂ ಇರುವುದು ಪ್ರಮುಖ ಅಂಶ ಎಂದು ದ.ಕ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರು ಹೇಳಿ ಹೇಳಿದರು
ಅವರು ಸೋಮವಾರ ಬಜ್ಪೆಯ ಹಳೆ ಏರ್ಫೋಟ್ ರಸ್ತೆ ರೇಗೋ ಗಾರ್ಡನ್ಸ್ ನಲ್ಲಿರುವ ಗ್ರೀನ್ ಸರ್ವಿಸಸ್ನ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರೀಶೀಲಿನೆ ನಡೆಸಿದ ಬಳಿಕ ಘಟಕದ ಯಶಸ್ವಿಗೆ ಶ್ಲಾಘನೆ ವ್ಯಕ್ತ ಪಡಿಸಿದರಲ್ಲದೆ ಅಗತ್ಯ ಫ್ರೋತ್ಸಾಹಗಳನ್ನು ನೀಡುವ ಬಗ್ಗೆಯೂ ಭರವಸೆ ನೀಡಿದರು.
ಸ್ಥಳೀಯ ಗ್ರಾಮ ಪಂಜಾಯತಿಗಳವರು ಯೋಜನೆಗೆ ಸೂಕ್ತ ಸಹಕಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಜಪೆ ಗ್ರಾಮ ಪಂಜಾಯತಿನಿಂದ ತ್ಯಾಜ್ಯ ವಿಲೇವಾರಿಯ ಖಾಸಗಿ ಟೆಂಡರ್ ವಹಿಸಿದ ರಾಬರ್ಟ್ ಫ್ರಾಂಕ್ಲಿನ್ ರೇಗೋ ಹಾಗೂ ಗ್ರೀನ್ ಬಜ್ಪೆ ಸರ್ವಿಸಸ್ನ ಇತರ ಪ್ರವರ್ತಕರುಗಲಾದ ಮಾಧವ ಎಂ.ಅಮೀನ್, ರವಿ ಪೂಜಾರಿ, ಅರುಣ್ ಪಿಂಟೋ ಅವರುಗಳ ಘಟಕ ಕಾರ್ಯ ಚಟುವಟಿಕೆಗಳು ಪರಿಸರ ಸಂರಕ್ಷಣಾ ಕ್ರಮಗಳು ತ್ಯಾಜ್ಯ ಸಂಗ್ರಹಣೆ, ಸಿಬ್ಬಂದಿ ವಿವರ ಮುಂತಾದುವುಗಳ ಬಗ್ಗೆ ಜಿ.ಪಂ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಯೋಜನಕಾರಿ ವಿಶ್ವನಾಥ್, ಬಜಪೆ ಗ್ರಾ.ಪಂ.ಸದಸ್ಯರಾದ ಜೇಕಬ್ ಪೀರೇರಾ, ಬಜಪೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರುಗಳು ಈ ಸಂದರ್ಭ ಉಪಸ್ಥಿತರಿದ್ದರು
