ವಿಟ್ಲ: ಶೋಕ ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಭವ್ಯ ಮೆರವಣಿಗೆಯು ವಿಟ್ಲದ ಪ್ರಮುಖ ಬೀದಿಗಳಲ್ಲಿ ನ.8 ರಂದು ಭಾನುವಾರ ನಡೆಯಿತು. ಉಡುಪಿ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ ವಂದನೀಯ ಫಾ| ಡೆನಿಸ್ ಡೇಸಾ, ಫಾ| ಪೀಟರ್ ಸೆರಾವೊ, ವಿಟ್ಲ ಇಗರ್ಜಿಯ ಧರ್ಮಗುರು ಫಾ| ಎರಿಕ್ ಕ್ರಾಸ್ತಾ, ಸಹಾಯಕ ಧರ್ಮಗುರು ಎಡ್ವಿನ್ ಮೋನಿಸ್, ವಿಟ್ಲ ಇಗರ್ಜಿಯ ಪಾಲನಾ ಸಮಿತಿಯ ಪದಾಧಿಕಾರಿಗಳು ಹಾಗೂ ವಿಟ್ಲ ಪ್ರಾಂತ್ಯದ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.





