ಬಂಟ್ವಾಳ: ಬಿ.ಸಿರೋಡ್ – ಕಡೂರು ರಾಷ್ಟ್ರೀಯ ಹೆದ್ದಾರಿಯ ಗಾಣದಪಡ್ಪು ಪೆಟ್ರೋಲ್ ಪಂಪ್ ಬಳಿ ಮೆಸ್ಕಾಂ ತಂತಿ ಕಂಬವೊಂದು ಅಪಾಯದ ಗಂಟೆಯನ್ನು ಬಾರಿಸುತ್ತಿದೆ. ಬಿಸಿರೋಡ್ ಸರ್ಕಲ್ ನಿಂದ ಅರ್ದಪಲಾಂಗ್ ಮುಂದೆ ಹೋದರೆ ರಸ್ತೆಯ ಬದಿಯಲ್ಲಿರುವ ಮೆಸ್ಕಾಂ ತಂತಿ ಕಂಬವೊಂದು ವಾಲಿದ ಸ್ಥಿತಿಯಲ್ಲಿ ತಿಂಗಳಿನಿಂದ ಇದ್ದರೂ ಮೆಸ್ಕಾಂ ಇಲಾಖೆ ಮಾತ್ರ ನೋಡದಂತೆ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸುತ್ತಿದ್ದಾರೆ.
ಯಾವ ಕ್ಷಣದಲ್ಲಾದರೂ ಕಂಬ ರಸ್ತೆಗೆ ಉರುಳಿಬೀಳುವ ಸಾಧ್ಯತೆ ಹೆಚ್ಚಾಗಿರುವುದರ ಬಗ್ಗೆ ಸಾರ್ವಜನಿಕರು ಮತ್ತು ವಾಹನ ಚಾಲಕರು ಭಯಬೀತರಾಗಿದ್ದಾರೆ. ಕಂಬ ಉರುಳಿ ಬಿದ್ದರೆ ಸಾವು ನೋವುಗಳು ಆಗು ಸಾದ್ಯತೆಯಿರುವುದರಿಂದ ಈ ಬಗ್ಗೆ ಸ್ಥಳೀಯ ಆಡಳಿತ ಮತ್ತು ಮೆಸ್ಕಾಂ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಂಬವನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ ಎಂದು ಸ್ಥಳಿಯರು ಒತ್ತಾಯಿಸುತ್ತಿದ್ದಾರೆ.



