ಬಂಟ್ವಾಳ : ಕಾನೂನು ನೆರವು ಕಾನೂನು ಜಾರಿ ಬಂದ ದಿನ ನವೆಂ¨ರ್ 9ನ್ನು ಕಾನೂನು ಸಾಕ್ಷರತಾ ದಿನವನ್ನಾಗಿ ಆಚರಿಸುತ್ತೇವೆ. ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಕೆ ಸಾರ್ವಜನಿಕರು ಹೆಚ್ಚಿನ ಪ್ರಯೋಜನ ಪಡೆದು ಇದರಿಂದ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದು ಎಂದು ಹಿರಿಯ ನ್ಯಾಯಾಧೀ ಶ ರಾದ ಚಂದ್ರಶೇಖರ ಯು. ನುಡಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘದ ಸಭಾ ಭವನದಲ್ಲಿ ರಾ ಷ್ಟ್ರೀಯ ಕಾನೂನು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಪನ್ಮೂಲ ವ್ಯಕ್ತಿ ಹಿರಿಯ ನ್ಯಾಯವಾದಿ ಪುಂಡಿಕಾಯಿ ನಾರಾಯಣ ಭಟ್ ಹಿಂದೂ ಉತ್ತರಾಧಿಕಾರಿ ಅಧಿನಿಯಮದ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಪಿ.ಜಯರಾಮ್ ರೈ ನೆಗೋಶಿಯೆಬಲ್ ಇನ್ಸ್ ಟ್ರೂಮೆಂಟ್ ಆಕ್ಟ್ ಬಗ್ಗೆ ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪ್ರಧಾನ ನ್ಯಾಯಾಧೀ ಶರಾದ ದೇವಾನಂದ್ , ಹೆಚ್ಚುವರಿ ನ್ಯಾಯಾಧೀ ಶರಾದ ಆರ್ ಮಹೇಶ್ , ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ, ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ ಉಪಸ್ಥಿತರಿದ್ದರು. ನ್ಯಾಯವಾದಿ ಆಶಾಮಣಿ ಡಿ.ರೈ ಸ್ವಾಗತಿಸಿದರು. ನ್ಯಾಯವಾದಿ ಶಿವಪ್ರಕಾಶ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

