ಬಂಟ್ವಾಳ : ದಕ್ಷಿಣ ಭಾರತ ಮಟ್ಟದ ಫೆಡರೇಷನ್ ಕಪ್ ವಾಲಿಬಾಲ್ ಪಂದ್ಯಾಟವನ್ನ್ನು ಬಂಟ್ವಾಳ ತಾಲೂಕಿನಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲೂಕು ಪಂಚಾಯತು ಬಂಟ್ವಾಳ, ಕಂದಾಯ ಇಲಾಖೆ, ಗ್ರಾಮ ಪಂಚಾಯತುಗಳು, ತಾಲೂಕಿನ ಇಲಾಖೆಗಳು ಆಶ್ರಯದಲ್ಲಿ ಸೋಮವಾರ ಬಂಟ್ವಾಳ ಎಸ್.ವಿ.ಎಸ್.ದೇವಳ ಫ್ರೌಡಶಾಲಾ ಕ್ರೀಡಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯು ಸಾಮಾಜಿಕ ಸಾಮರಸ್ಯದ ಕೊಂಡಿಯಾಗಿದ್ದು, ಜಾತಿ-ಮತ-ಭಾಷೆ-ಧರ್ಮದ ಗಡಿಯನ್ನು ಮೀರಿ ಮಾನವೀಯ ಧರ್ಮದಡಿಂiÀiಲ್ಲಿ ಸಮಾಜವನ್ನು ಕಟ್ಟಲು ಪೂರಕವಾಗಿದೆ, ನಾವೆಲ್ಲರೂ ಧ್ವೇಷದ ರಾಜಕೀಯಕ್ಕೆ ಕಡಿವಾಣ ಹಾಕಿ ಪರಸ್ಪರ ಪ್ರತಿ -ನಂಬಿಕೆ-ವಿಶ್ವಾಸದೊಂದಿಗೆ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಸುಳ್ಳು ಸುದ್ದಿಗಳೂ ಸಾಮಾಜಿಕ ಅಶಾಂತಿಗೆ ಕಾರಣವಾಗಿತ್ತಿದ್ದು, ನಾವೆಲ್ಲರೂ ನೈಜತೆಯನ್ನು ಅರಿತು ಪರಸ್ಪರ ಶಾಂತಿ ನೆಲೆಯಾಗುತ್ತದೆ. ಸದ್ಭಾವನೆ ಎಂಬುವುದು ಕೇವಲ ಒಂದು ದಿನಕ್ಕೆ, ಭಾಷಣಕ್ಕೆ ಸೀಮಿತವಾಗದೆ ಜೀವನಪರ್ಯಂತ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಮ್ಮನಸ್ಸಿನಿಂದ ಕಾರ್ಯ ನಿರ್ವಹಿಸಿದಾಗ ಅಭಿವೃದ್ದಿ ಸಾಧ್ಯವಾಗಿದ್ದು, ಕ್ರೀಡಾಕೂಟ ಪರಸ್ಪರ ಸ್ನೇಹ ಸಂ¨ಂಧಗಳನ್ನು ವಿಸ್ತರಿಸುವ ಜೊತೆಯಲ್ಲಿ ಮಾದರಿ ಸಮಾಜಕ್ಕೆ ಪ್ರೇರಣೆಯಾಗಲಿ ಎಂದರು.

IMG_9262
ತಾಲೂಕು ಪಂಚಾಯತು ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಖಿನ ಸಮಗ್ರ ಅಭಿವೃಧ್ದಿಯ ದೃಷ್ಟಿಯಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಅನ್ಯೋನ್ಯತೆ ಮೂಡಿಸುವ ದೃಷ್ಟಿಯಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇದಕ್ಕೆ ಎಲ್ಲಾ ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರ ದೊರೆತಿದ್ದು, ಇದಕ್ಕಾಗಿ ತಾ.ಪಂ.ಆಭಾರಿಯಾಗಿದೆ ಎಂದರು.
ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ ವಿದ್ಯಾ, ಜಿ.ಪಂ.ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ನಳಿನಿ ಶೆಟ್ಟಿ, ಮಮತಾಗಟ್ಟಿ, ಚೆನ್ನಪ್ಪ ಕೋಟ್ಯಾನ್, ಎಂ.ಎಸ್.ಮಹಮ್ಮದ್,ಜಯಶ್ರೀ ಪುದು, ಚಂದ್ರಪ್ರಕಾಶ ಶೆಟ್ಟಿ,ಸಂತೋಷ್ ಕುಮಾರ್ ರೈ, ಗಿರಿಜಾ, ತಾ.ಪಂ.ಮಾಜಿ ಅಧ್ಯಕ್ಷರಿಗಳಾದ ಪದ್ಮನಾಭ ಕೊಟ್ಟಾರಿ, ಲಲಿತಾ ಶೀವಪ್ಪ ನಾಯ್ಕ್, ಶೈಲಜಾ ಶೆಟ್ಟಿ, ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ್ ಕಾರಿಂಜ, ಶಿಶುಅಭಿವೃದ್ದಿ ಯೋಜನಾಧಿಕಾರಿ ಮಲ್ಲಿಕಾ, ಇಂಜಿನಿಯರ್ ಗಿರೀಶ್ , ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ನವೀನ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತು ಅಧ್ಯಕ್ಷ ಯಶವಂತ ದೇರಾಜೆ ಸ್ವಾಗತಿಸಿದರು.

ಉದ್ಘಾಟನಾ ಸಮಾರಂಭಕ್ಕೆ ಮುನ್ನ ಕುರ್ನಾಡು, ಮಾಣಿ, ಗೋಳ್ತಮಜಲು, ಸರಪಾಡಿ, ಸಂಗಬೆಟ್ಟು, ತುಂಬೆ, ಪುದು, ಕೊಳ್ನಾಡು, ವಿಟ್ಲ ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿವಿಧ ಬಣ್ಣದ ಸಮವಸ್ತ್ರಗಳನ್ನು ಧರಿಸಿ , ವಿದ್ಯಾರ್ಥಿ ವಾದ್ಯವೃಂದದ ಜೊತೆಯಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ದಿನವಿಡೀ ನಡೆದ ವಿವಿಧ ಕ್ರೀಡಾಕೂಟದಲ್ಲಿ 40 ವರ್ಷ ಮೇಲ್ಪಟ್ಟ ಹಾಗೂ 40 ವರ್ಷಕ್ಕಿಂತ ಕೆಳಗಿನವರಿಗಾಗಿ ನಡೆಸಿದ ವಿವಿಧ ಕ್ರೀಡೆಗಳಲ್ಲಿ ತುಂಬು ಉತ್ಸಾಹದಲ್ಲಿ ಪಾಲ್ಗೊಂಡರು.

 

By Suddi9

Leave a Reply

Your email address will not be published. Required fields are marked *