ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಗೂಂಡಗಿರಿ ಸಂಸ್ಕೃತಿ ಪ್ರಾರಂಭಗೊಂಡಿದೆ. ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಈ ಪ್ರವೃತಿ ಮಿತಿಮೀರಿದೆ. ಮುಖ್ಯಮಂತ್ರಿಯವರು ಇಲ್ಲಿಗ ಬಂದಾಗ ಪ್ರತೀ ಬಾರಿಯೂ ಒಂದು ವರ್ಗವನ್ನು ತೃಪ್ತಿಪಡಿಸುವಮತಹ ಹೇಳಿಕೆಗಳನ್ನಿ ನೀಡಿ ತೆರಳುತ್ತಾರೆ. ಇದು ಕಾಂಗ್ರೆಸ್ನ ಮರಿ ಪುಡಾರಿಗಳಿಗೆ ಪ್ರೇರಣೆಯಾಗಿದೆ. ಇದೇ ರೀತಿ ಮುಂದುವರೆದಲ್ಲಿ ಬಿಜೆಪಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಚ್ಚರಿಸದ್ದಾರೆ. ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಅವರು ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಈ ಹಿಂದೆಯೂ ಜಿಲ್ಲೆಗೆ ಬಂದಾಗ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ಇಂತಹ ಘಟನೆಗಳು ಮರುಕಳಿಸದಂತೆ ಮನವರಿಕೆ ಮಾಡಿದ್ದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡ ಬೇಕೆಂದು ತಿಳಿಸಿದರು.
ಮೂಡಬಿದ್ರೆ ಪತ್ರಕರ್ತ ಯಶೋಧರರವರಿಗೆ ಬೆದರಿಕೆ ಒಡ್ಡಿರುವ ಘಟನೆಯನ್ನು ಖಂಡಿಸಿದ ಅವರು ‘ಗೂಂಡಾ ಮಂತ್ರಿ’ ಅಭಯಚಂದ್ರ ಜೈನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು. ಅಥವಾ ಮುಖ್ಯಮಂತ್ರಿಯವರೇ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಬೇಕು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕಲು ಅಭಯಚಂದ್ರ ಜೈನ್ ಸರ್ವಾ ಧಿಕಾರಿಯಲ್ಲ. ಅವರು ರಾಜಿನಾಮೆ ನೀಡುವವರೆಗೂ ಬಿಜೆಪಿ ಬಿಡುವುದಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ.
ಒರ್ವ ಮಂತ್ರಿಯಾಗಿ ಅಭಯಚಂದ್ರ ಜೈನ್ ಸಾರ್ವಜನಿಕರಿಗೆ ಅಭಿಪ್ರಾಯ ನೀಡುವುದು ಕರ್ತವ್ಯ. ಆದರೆ ಈ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಕೈಕಾಲು ಮುರಿಯುತ್ತೇನೆ ಎಂದು ಬೆದರಿಕೆ ಒಡ್ಡುವುದು ಅವರ ಗೂಂಡಗಿರಿ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅಭಯಚಂದ್ರ ಜೈನ್ ಮಂತ್ರಿ ಆಗಲು ಯೋಗ್ಯ ಅಲ್ಲ ಎಂದು ಅವರು ಟೀಕಿಸಿದರು. ಈ ಬಗ್ಗೆ ಮುಖ್ಯಮಂತ್ರಿಯವರೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಜಿ.ಆನಂದ, ರಾಮದಾಸ್ ಬಂಟ್ವಾಳ, ಪುರುಷ ಸಾಲ್ಯಾನ್, ತುಂಗಪ್ಪ ಬಂಗೇರಾ ಹಾಜರಿದ್ದರು

By Suddi9

Leave a Reply

Your email address will not be published. Required fields are marked *