ಮೂಡುಬಿದಿರೆ: ಪದವಿಪೂರ್ವ ಕಾಲೇಜುಗಳ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದರೆ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆತ್ತಿದೆ. ಪ.ಪೂ ಶಿಕ್ಷಣ ಇಲಾಖೆ ದ.ಕ ಹಾಗೂ ಐಕಳ ಪೊಂಪೈ ಪ.ಪೂ ಕಾಲೇಜು ಜಂಟಿ ಆಶ್ರಯದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಚಾಲನೆ ನೀಡಿದರು. ಭಾತೃತ್ವ ಭಾವನೆಯನ್ನು ಪಸರಿಸುವ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಬೇಕೆಂದರು.


ಪೊಂಪೈ ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಫಾ ವಿಕ್ಟರ್ ಡಿ’ಮೆಲ್ಲೊ ಅಧ್ಯಕ್ಷತೆವಹಿಸಿದ್ದರು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಜಿಲ್ಲಾ ಕ್ರೀಡಾ ಸಂಯೋಜಕ ಶಶಿಧರ ಮಾಣಿ ಮುಖ್ಯ ಅತಿಥಿಯಾಗಿದ್ದರು.
ಪೊಂಪೈ ಪ.ಪೂ ಕಾಲೇಜು ಪ್ರಾಂಶುಪಾಲ ರೆ.ಫಾ ಜೆರೂಮ್ ಡಿ’ಸೋಜ ಸ್ವಾಗತಿಸಿದರು. ಪೊಂಪೈ ಕಾಲೇಜು ವಿದ್ಯಾಥರ್ಿ ರಕ್ಷಿತ್ ಪ್ರತಿಜ್ಞಾವಿಧಿ ಬೋಧಿಸಿದರು. ನವೀನ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದ ಸಂಘಟನಾ ಕಾರ್ಯದಶರ್ಿ ಆಲ್ವಿನ್ ಮಿರಾಂದ ವಂದಿಸಿದರು.
…..
ಮಂಗಳೂರು ಗ್ರಾಮಾಂತರ ಮುನ್ನಡೆ
ಕ್ರೀಡಾಕೂಟದ ಮೊದಲ ದಿನ ಮಂಗಳೂರು ಗ್ರಾಮಾಂತರ ತಂಡ ಮುನ್ನಡೆ ಸಾಧಿಸಿದ್ದು, ಮಂಗಳೂರು ನಗರ ದ್ವಿತೀಯ ಸ್ಥಾನದಲ್ಲಿದೆ.

