ಮೂಡುಬಿದರೆ: ಇರುವೈಲು ಕೆಂಪುಗುಡ್ಡೆ ದಿ. ಚಂದು ಪೂಜಾರಿ ಅವರಿಗೆ ಕಂಬಳ ನೇಗಿಲು ವಿಭಾಗದಲ್ಲಿ ಹಲವು ಪ್ರಥಮಗಳನ್ನು ಪಡೆದ ಕೋಣ ಶುಕ್ರವಾರ ಸಾವಿಗೀಡಾಗಿದೆ.
ಬೊಲ್ಲ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಕೋಣವು ಕಳೆದ ಮೂರು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದೆ.

