ಉಳ್ಳಾಲ: ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ಕಾರಿಗೆ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಆಸ್ಪತ್ರೆ ದಾಖಲಿಸಲಾಗಿದೆ.
5ul2

5ul3

5ul4
ಪಂಡಿತ್ ಹೌಸ್ ನಿವಾಸಿ ಯತಿನ್(18) ಎಂಬವರೇ ಗಂಭೀರ ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಯತಿನ್ ಪಂಡಿತ್ ಹೌಸ್ ಕಡೆಯಿಂದ ತನ್ನ ಸ್ನೇಹಿತನ ಬೈಕ್ನಲ್ಲಿ ತೊಕ್ಕೊಟ್ಟು ಕಡೆ ಹೋಗುತ್ತಿದ್ದಾಗ ತೊಕ್ಕೊಟ್ಟಿನಿಂದ ದೇರಳಕಟ್ಟೆ ಕಡೆ ಹೋಗುವ ಕಾರಿಗೆ ಡಿಕ್ಕಿ ಹೊಡೆದಿದ್ದು, ಅಫಘಾತದಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರನ್ನು ಚಲಾಯಿಸುತ್ತಿದ್ದ ವೈದ್ಯೆಗೆ ತಲೆಗೆ ಗಾಯವಾಗಿದೆ. ಬೈಕ್ನ ಟ್ಯಂಕ್ ಮತ್ತು ಎದುರಿನ ಚಕ್ರ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಸ್ತೆಯಲ್ಲಿ ಪೆಟ್ರೋಲ್ ಹರಿದು ಸಂಚಾರಕ್ಕೆ ತಡೆಯಾಯಿತು. ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *