ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.
ಬಾಲಕರ ವಿಭಾಗದಲ್ಲಿ 119 ಅಂಕ ಪಡೆದು ಪ್ರಶಸ್ತಿಯನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು 11 ಅಂಕ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ.ಪೂ. ಕಾಲೇಜು ಕಟೀಲು ಮತ್ತು ಪೊಂಪೈ ಪ.ಪೂ ಕಾಲೇಜು, ಐಕಳ ಪಡೆಯಿತು. ಬಾಲಕಿಯರ ವಿಭಾಗದಲ್ಲಿ 114 ಅಂಕ ಪಡೆದು ಆಳ್ವಾಸ್ ಪ.ಪೂ. ಕಾಲೇಜು ಪ್ರಶಸ್ತಿಯನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು 8 ಅಂಕ ಪಡೆದ ಸೈಂಟ್ ಜೋಸೆಫ್ ಕಾಲೇಜು ಬಜ್ಪೆ ಹಾಗೂ ನಿರಂಜನಸ್ವಾಮಿ ಪ.ಪೂ. ಕಾಲೇಜು ಸುಂಕದಕಟ್ಟೆ ಪಡೆಯಿತು.

ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸ್ನ ಅದೃಶಪ್ಪ, ದೀಕ್ಷಾ, ಸಿಮಿ ಮತ್ತು ಸೈಂಟ್ ಜೋಸೆಫ್ನ ಹರ್ಷಿತಾ ಪಡೆದುಕೊಂಡರು.
ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ದ.ಕ. ಹಾಗೂ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜು, ಸುಂಕದಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.

